ಉತ್ತರ ಭಾರತದ ನದಿಗಳು – ಗಂಗಾ ನದಿ, ಬ್ರಹ್ಮಪುತ್ರ ನದಿ, ಯಮುನಾ, ಸಿಂಧೂ ನದಿ, ಬಿಯಾಸ್ ನದಿ, ಸಟ್ಲೆಜ್ ನದಿ, ಚೀನಾಬ್ ನದಿ
ದಕ್ಷಿಣ ಭಾರತದ ನದಿಗಳು – ಕಾವೇರಿ, ಕೃಷ್ಣಾ, ಗೋದಾವರಿ, ಭೀಮಾ, ಮಲಪ್ರಭಾ, ತುಂಗಭದ್ರಾ, ಘಟಪ್ರಭಾ
ಮಧ್ಯ ಭಾರತದ ನದಿಗಳು- ಮಹಾನದಿ, ನರ್ಮದಾ, ತಪತಿ
✴ ಗಂಗಾ ನದಿ ✴
ಗಂಗಾನದಿ ಭಾರತದ ಪವಿತ್ರವಾದ ನದಿಗಳಲ್ಲಿ ಪ್ರಮುಖವಾದ ನದಿಯಾಗಿದೆ. ಗಂಗಾನದಿಯು ಭಾರತದ ಪುರಾಣ ಮತ್ತು ಮಹಾಕಾವ್ಯಗಳಲ್ಲಿ “ದೇವನದಿ” ಎಂದು ವರ್ಣಿಸಲ್ಪಟ್ಟಿದೆ. ಗಂಗಾ ನದಿಯು ಭಾರತ, ನೇಪಾಳ, ಬಾಂಗ್ಲಾದೇಶಗಳಲ್ಲಿ ಹರಿಯುತ್ತದೆ. ಗಂಗಾ ನದಿಯು ಹಿಮಾಲಯದ “ಗಂಗೋತ್ರಿ” ಎಂಬಲ್ಲಿ ಹುಟ್ಟಿ ಬಂಗಾಳಕೊಲ್ಲಿಯನ್ನು ಸೇರುತ್ತದೆ. ಗಂಗಾ ನದಿಯ ಆರಂಭ ಜಲ ಮೂಲಗಳು ಎರಡು ಅವುಗಳೆಂದರೆ, ಭಾಗೀರಥಿ ಮತ್ತು ಅಲಕಾನಂದ ಇದರಲ್ಲಿ ಭಾಗೀರಥಿಯನ್ನು ಗಂಗಾನದಿಯ ಮೂಲ ಎಂದು ಗುರುತಿಸಲಾಗಿದೆ. ಭಾಗೀರಥಿ ಗಂಗೋತ್ರಿ ಹಿಮನದಿಯಿಂದ ಗೋಮುಖ್ ಎಂಬಲ್ಲಿ ಹುಟ್ಟುತ್ತದೆ. ಅಲಕಾನಂದ ಟಬೇಟ್ ಗಡಿಯಲ್ಲಿ ಉಗಮಿಸುತ್ತದೆ. ಇವೆರಡೂ ಉತ್ತರಾಂಚಲದ ದೇವ ಪ್ರಯಾಗದಲ್ಲಿ ಸಂಧಿಸುತ್ತದೆ. ಇಲ್ಲಿಂದ ಮುಂದೆ ಇದನ್ನು ಗಂಗಾ ಎಂದು ಕರೆಯುತ್ತಾರೆ. ಗಂಗಾನದಿಯು ಹೃಷಿಕೇಶ ಹರಿದ್ವಾರದ ಬಳಿ ಮೈದಾನ ಪ್ರವೇಶಿಸಿ ಅಲಹಬಾದ್ ಬಳಿ ಯಮುನಾನದಿಯನ್ನು ಪಡೆಯುತ್ತದೆ.

ಗಂಗಾನದಿಯ ಉಪನದಿಗಳು- ಮಹಾಕಾಳಿ,
ಕರ್ನಾಲಿ, ಯಮುನಾ, ಮಹಾನಂದಾ, ಕೋಸಿ, ದಾಮೋದರ್, ಘಾಘ್ರಾ, ಗೋಮತಿ, ಸೊನ್. ಗಂಗಾ ನದಿಯು
ದೇಶದ ಅತಿದೊಡ್ಡ ಮತ್ತು ಉದ್ದವಾದ ನದಿಯಾಗಿದೆ. ದೇಶದಲ್ಲಿ ಅತಿ ಹೆಚ್ಚು ಜನರಿಗೆ
ನೀರಾವರಿಗೆ ಉಪಯುಕ್ತವಾಗಿದೆ. ಪ್ರಪಂಚದ ಅತ್ಯಂತ ದೊಡ್ಡ ನದಿ ಮುಖಜ ಭೂಮಿಯಾದ
“ಸುಂದರ್ಬನ್ಸ್” ಗಂಗಾನದಿಯ ಮುಖಜ ಭೂಮಿಯಾಗಿದೆ.
✴ ಸಿಂಧೂ ನದಿ ✴
ಈ
ನದಿಯು ಟಬೇಟಿನ ಪ್ರಸ್ಥಭೂಮಿಯಲ್ಲಿರುವ ಮಾನಸ ಸರೋವರದ ಹತ್ತಿರ ಉಗಮಿಸುತ್ತದೆ. ಸಿಂಧೂ
ನದಿಯನ್ನು ಟಬೇಟ್ನಲ್ಲಿ ‘ ಸಿಂಘೆ ಕಂಬಾಬ್’ ಎಂದು ಕರೆಯುತ್ತಾರೆ. ಈ ನದಿಯು ಕಾಶ್ಮೀರದ
ಮೂಲಕ ಉತ್ತರ ಪಾಕಿಸ್ತಾನಕ್ಕೆ ಹರಿದು , ದಕ್ಷಿಣ ಮುಖಕ್ಕೆ ತಿರುಗಿ ಪಾಕಿಸ್ತಾನದ
ಉದ್ದಕ್ಕೆ ಹರಿದು, ಕರಾಚಿ ನಗರದ ಬಳಿ ಅರಬ್ಬಿ ಸಮುದ್ರವನ್ನು ಸೇರುತ್ತದೆ.
ಸಿಂಧೂ ನದಿಯ ಉಪನದಿಗಳು- ಬಿಯಾಸ್ ನದಿ, ಚಿನಾಬ್ನದಿ, ಗಾರ್ ನದಿ, ರಾವಿ ನದಿ, ಸಟ್ಲೆಜ್ ನದಿ.
• ಚಿನಾಬ್ ನದಿ : ಈ ನದಿಯು ಸಿಂಧೂ ನದಿಯ ಉಪನದಿಯಾಗಿದೆ. ಭಾರತ ಮತ್ತು ಪಾಕಿಸ್ತಾನಗಳ ಉಭಯ ಪಂಜಾಬ್ ಪ್ರದೇಶಕ್ಕೆ ಆ ಹೆಸರು ಬರಲು ಕಾರಣವಾದ ಪಂಚನದಿಗಳ ಪೈಕಿ ಒಂದು.
• ಚಿನಾಬ್ ನದಿ : ಈ ನದಿಯು ಸಿಂಧೂ ನದಿಯ ಉಪನದಿಯಾಗಿದೆ. ಭಾರತ ಮತ್ತು ಪಾಕಿಸ್ತಾನಗಳ ಉಭಯ ಪಂಜಾಬ್ ಪ್ರದೇಶಕ್ಕೆ ಆ ಹೆಸರು ಬರಲು ಕಾರಣವಾದ ಪಂಚನದಿಗಳ ಪೈಕಿ ಒಂದು.
✴ ಸಟ್ಲೆಜ್ ನದಿ ✴
ಇದು ಸಿಂಧೂ ನದಿಯ ಉಪನದಿಯಾಗಿದೆ.ಈ ನದಿಯು ಹಿಮಾಚಲ ಪ್ರದೇಶ ಮತ್ತು ಪಂಜಾಬ್ನಲ್ಲಿ ಹರಿಯುತ್ತದೆ.
✴ ಬಿಯಾಸ್ ನದಿ ✴
ಈ ನದಿಯು ಸಿಂಧೂ ನದಿಯ ಉಪನದಿಯಾಗಿದೆ. ಈ ನದಿಯು ಹಿಮಾಲಯಾದಲ್ಲಿ ಹುಟ್ಟಿ ಹಿಮಾಚಲ ಪ್ರದೇಶದಲ್ಲಿ ಹರಿದು ಪಂಜಾಬ್ನ ಸಟ್ಲೆಜ್ ನದಿಯನ್ನು ಸೇರುತ್ತದೆ.
✴ ಬ್ರಹ್ಮಪುತ್ರ ನದಿ ✴
ಈ
ನದಿಯು ನೈರುತ್ಯ ಟಬೆಟಿನ ಮಾನಸ ಸರೋವರದ ಬಳಿ ಉಗಮಿಸುವುದು. ಮುಂದೆ ಹಿಮಾಲಯವನ್ನು ದಾಟಿ
ಭಾರತದ ಅರುಣಾಚಲ ಪ್ರದೇಶ ಮತ್ತು ಅಸ್ಸಾಂ ರಾಜ್ಯಗಳಲ್ಲಿ ನೈರುತ್ಯಾಭಿಮುಖವಾಗಿ
ಹರಿಯುವುದು. ನಂತರ ಬಾಂಗ್ಲಾದೇಶ ದ ಮೂಲಕ ಬಂಗಾಳಕೊಲ್ಲಿಯನ್ನು ಸೇರುತ್ತದೆ. ವ್ಯಾಪ್ತಿ
ರಾಜ್ಯಗಳು- ಅಸ್ಸಾಂ, ಅರುಣಾಚಲ ಪ್ರದೇಶ, ಪಶ್ಚಿಮ ಬಂಗಾಳ. ಬ್ರಹ್ಮಪುತ್ರ ನದಿಯನ್ನು
ಬಾಂಗ್ಲಾದೇಶದಲ್ಲಿ ‘ ಜಮುನಾ’ ಎಂದು , ಟಬೆಟಿನಲ್ಲಿ ‘ ಸಾಮಗ್ ಪೋ’ ‘ ಯಾರ್ಲುಂಗ್
ಜಾಂಗ್ಬೋ ಜಿಯಾಂಗ್ ‘ ಹೆಸರಿನಿಂದ ಕರೆಯುತ್ತಾರೆ.
✴ ಯಮುನಾ ನದಿ ✴
ಇದು
ಗಂಗಾ ನದಿಯ ಪ್ರಮುಖ ಉಪನದಿಯಾಗಿದೆ. ಇದರ ಉಗಮಸ್ಥಾನ ಉತ್ತರಖಾಂಡ ರಾಜ್ಯದ ಉತ್ತಕಾಶಿ
ಜಿಲ್ಲೆಯ ಯಮುನೋತ್ರಿ. ಇದು ಯಮುನೋತ್ರಿಯಿಂದ ಪ್ರವಹಿಸಿ ಉತ್ತರಪ್ರದೇಶದ ಅಲಹಾಬಾದ್ನಲ್ಲಿ
ಗಂಗಾ ನದಿಯನ್ನು ಸೇರುತ್ತದೆ. ತನ್ನ ಹಾದಿಯಲ್ಲಿ ಈ ನದಿಯು ಉತ್ತರಖಂಡ, ಹರಿಯಾಣ,
ದೆಹಲಿ, ಉತ್ತರಪ್ರದೇಶ ರಾಜ್ಯಗಳಲ್ಲಿ ಹರಿಯುತ್ತದೆ. ಭಾರತದ ಅತ್ಯಂತ ಉದ್ದವಾದ
ಉಪನದಿಯಾಗಿದೆ.
ಇದರ ಉಪನದಿಗಳು- ಚಂಬಲ್, ತೋನ್ಸಾ, ಬೇತ್ವಾ
ಇದರ ಉಪನದಿಗಳು- ಚಂಬಲ್, ತೋನ್ಸಾ, ಬೇತ್ವಾ
✴ ಕೃಷ್ಣಾ ನದಿ ✴
ದಕ್ಷಿಣ
ಭಾರತದ ಎರಡನೇ ಅತಿ ದೊಡ್ಡ ನದಿಯಾಗಿದೆ. ಮಹಾರಾಷ್ಟ್ರದ ಪಶ್ಚಿಮ ಘಟ್ಟದ
ಮಹಾಬಲೇಶ್ವರದಲ್ಲಿ ಉಗಮವಾಗಿ ಮಹಾರಾಷ್ಟ್ರ, ಕರ್ನಾಟಕ, ಹಾಗೂ ಆಂಧ್ರಪ್ರದೇಶದ ಮೂಲಕ
ಹರಿದು ಬಂಗಾಳಕೊಲ್ಲಿಯನ್ನು ಸೇರುತ್ತದೆ. ಇದರ ಉಪನದಿಗಳು- ಭೀಮಾ, ಘಟಪ್ರಭಾ, ಮಲಫ್ರಭಾ,
ತುಂಗ-ಭಧ್ರ. ಮಹಾರಾಷ್ಟ್ರದಲ್ಲಿ ಹರಿಯುತ್ತಿರುವ ನದೀ ಬಾಗಕ್ಕೆ ಕೊಯ್ನಾದ ಹತ್ತಿರ,
ಕರ್ನಾಟಕದಲ್ಲಿ ಆಲಮಟ್ಟಿ ಮತ್ತು ಹಾಗೂ ಆಂಧ್ರಪ್ರದೇಶದಲ್ಲಿ ಶ್ರೀಶೈಲ ಮತ್ತು
ನಾಗಾರ್ಜುನಸಾಗರದಲ್ಲಿ ಕೃಷ್ಣಾ ನದಿಗೆ ಅಣೆಕಟ್ಟನ್ನು ಕಟ್ಟಲಾಗಿದೆ.
✴ ಕಾವೇರಿ ನದಿ ✴
ಕರ್ನಾಟಕದ
ಜೀವನದಿಯಾಗಿದೆ. ಇದು ಕೊಡಗು ಜಿಲ್ಲೆಯ ‘ತಲಕಾವೇರಿಯಲ್ಲಿ ಉಗಮಿಸುವುದು. ಮೈಸೂರು
ಜಿಲ್ಲೆಯ ಮೂಲಕ ತಮಿಳುನಾಡಿಗೆ ಹರಿದು ಬಂಗಾಳಕೊಲ್ಲಿಯನ್ನು ಸೇರುತ್ತದೆ. ಈ ನದಿಯು ‘
ದಕ್ಷಿಣ ಗಂಗೆ ಎಂದು ಪ್ರಸಿದ್ದಿ ಪಡೆದಿದೆ.
ಕರ್ನಾಟಕದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಿರುವ ಅತಿ ಪ್ರಸಿದ್ದ ಜಲಾಶಯ ಕೃಷ್ಣರಾಜಸಾಗರ ಅಣೆಕಟ್ಟು.
ಕಾವೇರಿ ನದಿಯ ಉಪನದಿಗಳು- ಹೇಮಾವತಿ, ಹಾರಂಗಿ, ಅರ್ಕಾವತಿ, ಶಿಂಷಾ, ಕಪಿಲೆ, ಪಾಲಾರ್.
ಕರ್ನಾಟಕದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಿರುವ ಅತಿ ಪ್ರಸಿದ್ದ ಜಲಾಶಯ ಕೃಷ್ಣರಾಜಸಾಗರ ಅಣೆಕಟ್ಟು.
ಕಾವೇರಿ ನದಿಯ ಉಪನದಿಗಳು- ಹೇಮಾವತಿ, ಹಾರಂಗಿ, ಅರ್ಕಾವತಿ, ಶಿಂಷಾ, ಕಪಿಲೆ, ಪಾಲಾರ್.
✴ ತುಂಗಭದ್ರ ನದಿ ✴
ದಕ್ಷಿಣ
ಭಾರತದ ಪ್ರಮುಖ ನದಿಯಾಗಿದೆ. ತುಂಗಾ ನದಿ ಮತ್ತು ಭದ್ರಾ ನದಿಗಳು ಶಿವಮೊಗ್ಗ ಜಿಲ್ಲೆಯ
ಕೂಡಲಿಯಲ್ಲಿ ಸೇರಿ, ಈ ನದಿ ಪ್ರಾರಂಭವಾಗುತ್ತದೆ. ಮುಂದೆಇದು ಆಂದ್ರಪ್ರದೇಶದ ಕರ್ನೂಲ್
ಬಳಿ ಕೃಷ್ಣಾ ನದಿಯನ್ನು ಸೇರುತ್ತದೆ.
✴ ಭೀಮಾ ನದಿ ✴
ಈ
ನದಿಯು ಕೃಷ್ನಾ ನದಿಯ ಉಪನದಿಯಾಗಿದೆ. ಇದು ಮಹಾರಾಷ್ಟ್ರದ ಪುಣೆಯ ಹತ್ತಿರವಿರುವ
ಭೀಮಾಶಂಕರ ಎಂಬಲ್ಲಿ ಹುಟ್ಟಿ ಕರ್ನಾಟಕದಲ್ಲಿ ರಾಯಚೂರಿನಲ್ಲಿ ಕೃಷ್ಣಾ ನದಿಯನ್ನು
ಸೇರುತ್ತದೆ.
✴ ಮಲಪ್ರಭಾ ನದಿ ✴
ಇದು ಕೃಷ್ಣಾ
ನದಿಯ ಉಪನದಿಯಾಗಿದೆ. ಈ ನದಿಯು ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕನಕುಂಬಿ
ಗ್ರಾಮದಿಂದ ಪಶ್ಚಿಮಕ್ಕೆ ಹರಿದು , ಸಹ್ಯಾದ್ರಿ ಪರ್ವತಶ್ರೇಣಿಯಲ್ಲಿ ಹುಟ್ಟುತ್ತದೆ.
✴ ಘಟಪ್ರಭಾ ನದಿ ✴
ಈ ನದಿಯು ಕೃಷ್ಣಾ ನದಿಯ ಉಪನದಿಯಾಗಿದೆ. ಘಟಪ್ರಭಾ ನದಿ ಮಹಾರಾಷ್ಟ್ರದ ಅಂಬೋಲದಲ್ಲಿ ಹುಟ್ಟಿ ವಿಜಾಪುರದ ಬಳಿ ಕೃಷ್ಣಾನದಿ ಸೇರುತ್ತದೆ.
✴ ಅರ್ಕಾವತಿ ನದಿ ✴
ಅರ್ಕಾವತಿ ನದಿಯು ಕಾವೇರಿ ನದಿಯ ಉಪನದಿಯಾಗಿದೆ. ಈ ನದಿಯು ಕರ್ನಾಟಕ ರಾಜ್ಯದ ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಬೆಟ್ಟದಲ್ಲಿ ಉಗಮಿಸುವ ನದಿಯಾಗಿದೆ.
✴ ಗೋದಾವರಿ ನದಿ ✴
ದಕ್ಷಿಣ
ಭಾರತದ ಅತ್ಯಂತ ದೊಡ್ಡ ನದಿಯಾಗಿದೆ. ಇದು ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ‘ತ್ರಿಯಂಬಕ”
ಬಳಿ ಹುಟ್ಟುತ್ತದೆ. ಆಂಧ್ರಪ್ರದೇಶದಲ್ಲಿ ಹರಿದು ಬಂಗಾಳಕೊಲ್ಲಿಯನ್ನು ಸೇರುತ್ತದೆ.
ವ್ಯಾಪ್ತಿ ರಾಜ್ಯಗಳು- ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ, ಪುದುಚೇರಿ, ಛತ್ತಿಸಘಡ.
ಈ ನದಿಯನ್ನು ದಕ್ಷಿಣ ಭಾರತದ ವೃಧ್ಧ ನದಿ ಎಂದು ಕರೆಯುವರು.
✴ ನರ್ಮದಾ ನದಿ ✴
ನರ್ಮದಾ
ನದಿಯು ಮಧ್ಯಪ್ರದೇಶದ ಅಮರಕಂಟಕದಲಿ ಉಗಮಿಸುತ್ತದೆ. ನಂತರ ಗುಜರಾತ್ ಮೂಲಕ ಹರಿದು
ಅರಬ್ಬೀ ಸಮುದ್ರವನ್ನು ಸೇರುತ್ತದೆ. ವ್ಯಾಪ್ತಿ ರಾಜ್ಯಗಳು- ಮಧ್ಯ ಪ್ರದೇಶ,
ಮಹಾರಾಷ್ಟ್ರ. ಗುಜರಾತ್. ಇದು ಪಶ್ಚಿಮಕ್ಕೆ ಹರಿಯುವ ಉದ್ದವಾದ ನದಿಗಳಲ್ಲಿ ಮೊದಲನೆಯದು.
‘ ಅಲಿಯಾಬೆಟ್’ ಎಂಬುವುದು ನರ್ಮದಾ ನದಿ ನಿರ್ಮಿತ ದ್ವೀಪಗಳಲ್ಲಿ ಅತದೊಡ್ಡ ದ್ವೀಪ.
✴ ಮಹಾನದಿ ✴
ಈ
ನದಿಯು ಛತ್ತೀಸಘಡದ ನಗರಿ ಟೌನ್ ಎಂಬಲ್ಲಿ ಹುಟ್ಟುತ್ತದೆ. ನಂತರ ಒರಿಸ್ಸಾದ ಮೂಲಕ
ಬಂಗಾಳಕೊಲ್ಲಿಯನ್ನು ಸೇರುತ್ತದೆ. ಹಿರಾಕುಡ್ ಅಣೆಕಟ್ಟನ್ನು ಈ ನದಿಗೆ ಕಟ್ಟಲಾಗಿದೆ.
✴ ತಪತಿ ನದಿ ✴
ಈ
ನದಿಯು ಮಧ್ಯಪ್ರದೇಶದ ಬೇತುಲ್ ಎಂಲ್ಲಿ ಹುಟ್ಟುತ್ತದೆ. ನಂತರ ಗುಜರಾತ್ ಮೂಲಕ ಅರಬ್ಬಿ
ಸಮುದ್ರವನ್ನು ಸೇರುತ್ತದೆ. ವ್ಯಾಪ್ತಿ ರಾಜ್ಯಗಳು- ಮಧ್ಯಪ್ರದೇಶ, ಗುಜರಾತ್.
No comments:
Post a Comment