Monday, 15 October 2018

ಗುಪ್ತರು ಮತ್ತು ವರ್ಧನರು

**ಗುಪ್ತರು ಮತ್ತು ವರ್ಧನರು
**
ಆಕರಗಳು
ಗುಪ್ತರ ಇತಿಹಾಸವನ್ನು ತಿಳಿದುಕೊಳ್ಳಲು ಸಹಾಯಕವಾಗುವ ಆಕರಗಳು ಯಾವುವೆಂದರೆ: 1. ಅಲಹಾಬಾದ್ ಸ್ತಂಭ ಶಾಸನ
2. ಮೆಹುರೂಲಿಯ ಸ್ತಂಭ ಶಾಸನ
3. ವಿಶಾಖದತ್ತನ ಮುದ್ರಾರಾಕ್ಷಸ ಮತ್ತು ದೇವಿ ಚಂದ್ರಗುಪ್ತ
4. ರಾಜಶೇಖರನ ಕಾವ್ಯಮೀಮಾಂಸೆ
5. ಕಾಳಿದಾಸನ ಕೃತಿಗಳು
6. ವಿಜ್ಜಿಕೆಯ ಕೌಮುದಿಮಹೋತ್ಸವ
7. ಫಾಹಿಯಾನ ಮತ್ತು ಇತ್ಸಿಂಗ್ರ ಬರವಣಿಗೆಗಳು
ರಾಜಕೀಯ ಇತಿಹಾಸ
• ಗುಪ್ತರ ಮೊದಲ ಐತಿಹಾಸಿಕ ಪುರುಷನೆಂದು ಒಂದನೇ ಚಂದ್ರಗುಪ್ತನನ್ನು ಕರೆಯುತ್ತಾರೆ.
• ಈತ ಲಿಚ್ಚವಿ ರಾಜಕುಮಾರಿಯಾದ ಕುಮಾರದೇವಿಯನ್ನು ಮದುವೆಯಾದನು. ಇದರಿಂದ ಗುಪ್ತರ ಬಲ ಮತ್ತು ಪ್ರತಿಷ್ಠೆ ಹೆಚ್ಚಾಯಿತು.
• ಒಂದನೇ ಚಂದ್ರಗುಪ್ತನು ಸಾ.ಶ. 319-20ರಲ್ಲಿ ಪಟ್ಟಕ್ಕೆ ಬಂದಾಗ ಗುಪ್ತ ಶಕೆ ಆರಂಭವಾಯಿತು.
ಸಮುದ್ರಗುಪ್ತ (ಸಾ.ಶ. 335 - 380)
• ಚಂದ್ರಗುಪ್ತನ ನಂತರ ಇವನ ಮಗ ಸಮುದ್ರಗುಪ್ತನು ಅಧಿಕಾರಕ್ಕೆ ಬಂದನು.
• ಹರಿಸೇನನು ರಚಿಸಿದ ಅಲಹಾಬಾದ್ ಪ್ರಶಸ್ತಿಯಿಂದಾಗಿ ಅವನ ಸಾಧನೆಗಳು ಅಮರಗೊಂಡಿವೆ.
• ಇದು ಸಂಸ್ಕøತ ಭಾಷೆಯಲ್ಲಿದ್ದು, ಅಶೋಕನ ಸ್ತಂಭವೊಂದರ ಮೇಲೆ ಕೆತ್ತಲಾಗಿದೆ. ಭಾರತದ ಬಹುಭಾಗವು ಇವನ ಕಾಲದಲ್ಲಿ ಗುಪ್ತರ ಆಳ್ವಿಕೆಗೆ ಒಳಪಟ್ಟಿತ್ತು.
• ಇವನ ಅಶ್ವಮೇಧಯಾಗವು ವೈದಿಕ ವಿಧಿ ವಿಧಾನಗಳನ್ನು ಮರುಕಳಿಸಿತು.
• ಸಮುದ್ರಗುಪ್ತನು ಕೇವಲ ಆಕ್ರಮಣಕಾರಿಯಲ್ಲ. ಇವನು ಮಹಾಕವಿ ಹಾಗೂ ಸಂಗೀತಪ್ರಿಯನೂ ಆಗಿದ್ದನು.
• ಇವನ ಸಂಗೀತದ ವ್ಯಾಮೋಹವು ಅವನ ಕಾಲದ ಚಿನ್ನದ ನಾಣ್ಯಗಳಲ್ಲಿ ವೀಣೆಯನ್ನು ನುಡಿಸುತ್ತಿರುವ ಚಿತ್ರದ ಮೂಲಕ ವ್ಯಕ್ತವಾಗಿದೆ.
ಎರಡನೆಯ ಚಂದ್ರಗುಪ್ತ (ಸಾ.ಶ.380-412)
• ಸಮುದ್ರಗುಪ್ತನ ಸಾಮ್ರಾಜ್ಯವನ್ನು ಎರಡನೇ ಚಂದ್ರಗುಪ್ತನು ಮತ್ತಷ್ಟು ವಿಸ್ತರಿಸಿ ಸ್ಥಿರತೆಯನ್ನು ತಂದನು.
• ಇವನು ಶಕರನ್ನು ಸೋಲಿಸಿ ಪಶ್ಚಿಮ ಭಾರತವನ್ನು ಗುಪ್ತರ ಸಾಮ್ರಾಜ್ಯಕ್ಕೆ ಸೇರಿಸಿಕೊಂಡನು.
• ಭಾರತದ ಅನೇಕ ರಾಜ ಮನೆತನಗಳೊಂದಿಗೆ ಈತನು ಮದುವೆ ಮೂಲಕ ಸಂಬಂಧವನ್ನು ಬೆಳೆಸಿ ಪ್ರಭಾವಿಯಾಗಿ ವಿಕ್ರಮಾದಿತ್ಯನೆಂಬ ಬಿರುದನ್ನು ಪಡೆದನು. ಇವನ ಕಾಲದಲ್ಲಿ ಯುದ್ಧಗಳಿಗಿಂತ ಸಾಹಿತ್ಯ ಹಾಗೂ ಕಲೆಗೆ ನೀಡಿದ ಘೋಷಣೆಯು ಸ್ಮರಣೀಯವಾಗಿದೆ.
• ಸುಪ್ರಸಿದ್ಧ ಸಂಸ್ಕøತ ಕವಿ ಹಾಗೂ ನಾಟಕಕಾರ ಕಾಳಿದಾಸನು ಇದೇ ಕಾಲಕ್ಕೆ ಸೇರಿದವನು. ಮೇಘದೂತ, ರಘುವಂಶ, ಕುಮಾರಸಂಭವ ಹಾಗೂ ಋತುಸಂಹಾರ ಅವನ ಕಾವ್ಯಗಳು. ಅಭಿಜ್ಞಾನ ಶಾಕುಂತಲವು ಅವನ ಶ್ರೇಷ್ಠ ನಾಟಕಗಳಲ್ಲಿ ಒಂದು.
• ಶೂದ್ರಕನ ಮೃಚ್ಛಕಟಿಕ ಹಾಗೂ ವಿಶಾಖದತ್ತನ ಮುದ್ರರಾಕ್ಷಸ ಈ ಕಾಲದ ಇತರ ಕೃತಿಗಳು.
• ಹೂಣರ ದಾಳಿಗೆ ನಿರಂತರವಾಗಿ ಒಳಗಾಗಿ ಗುಪ್ತರ ಸಾಮ್ರಾಜ್ಯವು ಪತನ ಕಂಡಿತು.
• ಗುಪ್ತರು ಬೃಹತ್ ಸುಸಜ್ಜಿತ ಸೇನೆಯನ್ನೇನೂ ಹೊಂದಿರಲಿಲ್ಲ. ಸಾಮಂತರು ಸೈನ್ಯದ ಅವಶ್ಯಕತೆಯನ್ನು ಯುದ್ಧಗಳ ಸಮಯದಲ್ಲಿ ನೀಗುತ್ತಿದ್ದರು. ಹೀಗಾಗಿಯೇ ಸಾಮಂತರು ಇವರ ಕಾಲದಲ್ಲಿ ಬಹಳಷ್ಟು ಅಧಿಕಾರವನ್ನು ಚಲಾಯಿಸುತ್ತಿದ್ದರು.
• ಅಧಿಕಾರ ವರ್ಗವು ಕುಮಾರ ಅಮಾತ್ಯರಿಂದ ಕೂಡಿತ್ತು. ವಿವಿಧ ಹುದ್ದೆಗಳನ್ನು ಕುಮಾರ ಅಮಾತ್ಯರು ಹೊಂದಿದ್ದರು. ಆಡಳಿತವು ವಿಕೇಂದ್ರೀಕೃತಗೊಂಡಿತ್ತು.
• ಪುರೋಹಿತರು ಅನೇಕ ದಾನ ದತ್ತಿಗಳನ್ನು ಪಡೆಯುತ್ತಿದ್ದರು.
• ಭೂದಾನವಾಗಿ ಅನೇಕ ಹಳ್ಳಿಗಳನ್ನು ಒಳಗೊಂಡ ಹಾಗೆ ಇವರುಗಳಿಗೆ ನೀಡಲಾಗುತ್ತಿತ್ತು.
• ಅನೇಕ ದೇವಾಲಯಗಳೂ ಇದರಿಂದ ಅಭಿವೃದ್ಧಿಯನ್ನು ಕಂಡವು. ಇಂತಹ ಪ್ರದೇಶಗಳು ಅನೇಕ ಆರ್ಥಿಕ ಹಾಗೂ ಆಡಳಿತಾತ್ಮಕ ವಿನಾಯತಿಗಳನ್ನು ಪಡೆದುದಲ್ಲದೆ ಎಲ್ಲ ವ್ಯವಹಾರದಲ್ಲಿಯು ಸ್ವತಂತ್ರ ಪ್ರದೇಶಗಳಾದವು.
• ಕ್ರಮೇಣವಾಗಿ ಆ ಪ್ರದೇಶದ ನಿವಾಸಿಗಳು, ಕೃಷಿಕರು, ಕುಶಲಕರ್ಮಿಗಳು, ಭೂಮಾಲೀಕರ ಕಟ್ಟುಪಾಡಿಗೆ ಅಧೀನರಾದರು. ಹೀಗೆ ಸಮಾಜವು ಸಂಕೀರ್ಣ ಹಾದಿಯತ್ತ ಸಾಗಿತ್ತು.
• ಈ ಕಾಲದಲ್ಲಿ ಪಾಶ್ಚಿಮಾತ್ಯರೊಂದಿಗೆ ಗುಪ್ತರಿಗಿದ್ದ ವ್ಯಾಪಾರ ಕುಸಿಯಿತು. ಇದರಿಂದಾಗಿ ಗುಪ್ತರ ಆರ್ಥಿಕ ವ್ಯವಸ್ಥೆ ಕುಂಠಿತಗೊಂಡಿತು.
• ಸಾಮ್ರಾಜ್ಯದ ಮೇಲೆ ಹೇರಲಾದ ನಿರ್ಬಂಧಗಳು ಆಂತರಿಕ ವ್ಯಾಪಾರವನ್ನು ಸಹ ಸ್ಥಗಿತಗೊಳಿಸಿತು. ವ್ಯಾಪಾರವು ಈಗ ಗ್ರಾಮಗಳಿಗೆ ಸೀಮಿತಗೊಂಡಿತು.
• ವ್ಯಾಪಾರಗಳಲ್ಲಿ ಕಂಡ ಕುಸಿತವು ನಗರಕೇಂದ್ರಗಳ ಅವನತಿಗೆ ಕಾರಣವಾಯಿತು ಈ ಸಂದರ್ಭದಲ್ಲಿ ಪಾಟಲೀಪುತ್ರವು ಕೇವಲ ಒಂದು ಗ್ರಾಮವಾಗಿ ಬದಲಾಯಿತು.
• ಭಕ್ತಿಯನ್ನು ಆಧರಿಸಿದ ವಿವಿಧ ಧರ್ಮಗ್ರಂಥಗಳಾದ ಧರ್ಮಶಾಸ್ತ್ರಗಳು ಹಾಗೂ ಪುರಾಣಗಳ ಸೃಷ್ಟಿಯ ಪರ್ವಕಾಲವಿದು.
• ವರಾಹಮಿಹಿರ, ಭಾಸ್ಕರ, ಆರ್ಯಭಟ, ಚರಕ ಹಾಗೂ ಶುಶ್ರುತ ಈ ಕಾಲದ ಶ್ರೇಷ್ಠ ವಿಜ್ಞಾನಿಗಳು. ವರಾಹಮಿಹಿರ, ಭಾಸ್ಕರ ಮತ್ತು ಆರ್ಯಭಟ ಜ್ಯೋತಿಷ್ಯಶಾಸ್ತ್ರ, ಖಗೋಳ ಹಾಗೂ ಗಣಿತ ಅಧ್ಯಯನಕ್ಕೆ ಮಹತ್ವದ ಕೊಡುಗೆಯನ್ನು ನೀಡಿದವರು.
• ಚರಕ ಹಾಗೂ ಶುಶ್ರುತರು ವೈದ್ಯಕೀಯ ಅಧ್ಯಯನವನ್ನು ಮಾಡಿದರು.
• ಚರಕನು ಚರಕ ಸಂಹಿತೆಯನ್ನು ರಚಿಸಿದನು. ಶುಶ್ರುತನು ಶಸ್ತ್ರಚಿಕಿತ್ಸೆಯನ್ನು ಕುರಿತಾದ ಶುಶ್ರುತ ಸಂಹಿತೆಯನ್ನು ರಚಿಸಿದನು.
ಗುಪ್ತರ ಕಾಲದ ವಿಜ್ಞಾನಿಗಳು
1. ಧನ್ವಂತರಿ : ವೈದ್ಯಕೀಯ ಕ್ಷೇತ್ರದಲ್ಲಿ ಪ್ರಸಿದ್ಧ ವಿದ್ವಾಂಸನಾಗಿದ್ದನು. ಇವನು ಆಯುರ್ವೇದ ಶಾಸ್ತ್ರದ ತಜ್ಞನಾಗಿದ್ದನು. ಭಾರತದ ವೈದ್ಯಶಾಸ್ತ್ರದ ಪಿತಾಮಹ. ಆಯುರ್ವೇದ ನಿಘಂಟುವನ್ನು ವೈದ್ಯಶಾಸ್ತ್ರಕ್ಕೆ ಕೊಡುಗೆಯಾಗಿ ನೀಡಿದನು.
2. ಚರಕ : ವೈದ್ಯವಿಜ್ಞಾನಿಯಾಗಿದ್ದನು. ಚರಕ ಸಂಹಿತೆ ಎಂಬ ಗ್ರಂಥವನ್ನು ರಚಿಸಿ ವೈದ್ಯಕೀಯ ಕ್ಷೇತ್ರಕ್ಕೆ ಮಹತ್ತರ ಕೊಡುಗೆಯನ್ನು ನೀಡಿದ್ದಾನೆ.
3. ಶುಶ್ರುತ : ಶಸ್ತ್ರ ಚಿಕಿತ್ಸಾ ವೈದ್ಯನಾಗಿದ್ದನು. ಭಾರತೀಯ ಪರಂಪರೆಯಲ್ಲಿ ಶಸ್ತ್ರ ಚಿಕಿತ್ಸೆಯನ್ನು ನೀಡುವ ಕ್ರಮವನ್ನು ಮೊದಲು ತಿಳಿಸಿದವನು ಇವನು. ಅಂದಿನಕಾಲದಲ್ಲಿ ಸೈನಿಕರ ಚಿಕಿತ್ಸೆಗಾಗಿ ಶುಶ್ರುತನು ಪ್ರತ್ಯೇಕ ವಿಭಾಗ ಇತ್ತೆಂದು ತಿಳಿಸಿದ್ದಾನೆ. ಆಧುನಿಕ ಕಾಲದಲ್ಲಿ ನಡೆಸುವ ಶಸ್ತ್ರ ಚಿಕಿತ್ಸೆಗಳಂತೆ ಶುಶ್ರ್ರುತನು ಶಸ್ತ್ರ ಚಿಕಿತ್ಸೆಯನ್ನು ನೆಡೆಸುವಲ್ಲಿ ಪ್ರಾವಿಣ್ಯತೆಯನ್ನು ಪಡೆದು ವೈದ್ಯಕೀಯ ಕ್ಷೇತ್ರಕ್ಕೆ ಗುರುತರವಾದ ಕಾಣಿಕೆ ನೀಡಿದ್ದಾನೆ.
4. ಆರ್ಯಭಟ : ಈತನು ಖಗೋಳ ಮತ್ತು ಗಣಿತ ಶಾಸ್ತ್ರಗಳ ಪ್ರಖ್ಯಾತ ವಿಜ್ಞಾನಿಯಾಗಿದ್ದನು. ಇವನು ವರಾಹಮಿಹಿರನ ನಂತರದಲ್ಲಿ ಬರುವ ಪ್ರಮುಖ ವಿಜ್ಞಾನಿಯಾಗಿದ್ದನು. ಈತನು ಖಗೋಳ ಮತ್ತು ಗಣಿತ ಕ್ಷೇತ್ರಗಳಿಗೆ ನೀಡಿದ ಕೊಡುಗೆ ಮಹತ್ತರವಾದುದು. ಈ ಕಾರಣಕ್ಕಾಗಿಯೇ ಸರ್ವಶ್ರೇಷ್ಠ ವಿಜ್ಞಾನಿಗಳಿಗೆ ಭಾರತ ಸರ್ಕಾರವು ಆರ್ಯಭಟ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿದೆ. ಭಾರತದ ಪ್ರಥಮ ಉಪಗ್ರಹಕ್ಕೂ ಆರ್ಯಭಟನ ಹೆಸರಿಡಲಾಗಿದೆ. ಇವನು ಸೊನ್ನೆಯನ್ನು ಕಂಡುಹಿಡಿದನೆಂದು ಅಭಿಪ್ರಾಯಪಡಲಾಗಿದೆ. ಬೀಜಗಣಿತ ಪದ್ಧತಿಯನ್ನು ಭಾರತದಲ್ಲಿ ಮೊದಲಿಗೆ ತಿಳಿಸಿದವನಾಗಿದ್ದಾನೆ. ಸೂರ್ಯ ಹಾಗೂ ಚಂದ್ರಗ್ರಹಣಗಳಾಗುವುದು ರಾಹುವಿನಿಂದ ಅಲ್ಲ. ಪೃಥ್ವಿಯು ತನ್ನ ಕಕ್ಷೆಯಲ್ಲಿ ಪ್ರತಿದಿನವೂ ಸುತ್ತುತ್ತಾ ಸೂರ್ಯನನ್ನು ಪ್ರದಕ್ಷಿಣೆ ಮಾಡುವುದರಿಂದ ಎಂಬುದನ್ನು ಮನವರಿಕೆ ಮಾಡಿಕೊಟ್ಟನು.
5. ವರಾಹಮಿಹಿರ : ಇವನು ಪ್ರಖ್ಯಾತ ಖಗೋಳಶಾಸ್ತ್ರಜ್ಞನಾಗಿದ್ದನು. ಪಂಚಸಿದ್ಧಾಂತಿಕಾ ಎಂಬ ಖಗೋಳ ಶಾಸ್ತ್ರದ ಗ್ರಂಥವನ್ನು ರಚಿಸಿದನು. ಈ ಗ್ರಂಥವನ್ನು ಖಗೋಳಶಾಸ್ತ್ರದ ಬೈಬಲ್ಎಂದು ಕರೆಯುವರು. ಬೃಹತ್ ಸಂಹಿತಾ, ಬೃಹತ್ ಜಾತಕ, ಲಘು ಜಾತಕ ಎಂಬ ಗ್ರಂಥಗಳನ್ನು ಇವನು ರಚಿಸಿದ್ದಾನೆ. ಖಗೋಳಶಾಸ್ತ್ರ, ಜ್ಯೋತಿಷ್ಯ, ಭೂಗೋಳ, ಹವಾಮಾನ, ಮುಂತಾದ ಕ್ಷೇತ್ರಗಳಲ್ಲಿ ವಿದ್ವಾಂಸನಾಗಿದ್ದನು. ಸಂದರ್ಭದಲ್ಲಿ ಹುಟ್ಟಿಕೊಂಡವು. ಅವುಗಳಲ್ಲಿ ವರ್ಧನರ ರಾಜ್ಯವೂ ಒಂದು. ಇವರು 6ನೆಯ ಶತಮಾನದಲ್ಲಿ ಥಾಣೇಶ್ವರದಿಂದ ರಾಜ್ಯವನ್ನಾಳಿದರು. ಕೆಲವು ತಾಮ್ರ ಶಾಸನಗಳು, ಬಾಣನ ಹರ್ಷಚರಿತೆ ಹಾಗೂ ಚೀನಾದ ಪ್ರವಾಸಿ ಹ್ಯೂಯನ್ತ್ಸಾಂಗನ ಬರವಣಿಗೆಗಳು ಈ ಕಾಲದ ಬಗ್ಗೆ ಬೆಳಕನ್ನು ಚೆಲ್ಲುತ್ತವೆ.
ವರ್ಧನರು
• ಪುಷ್ಯಭೂತಿಯು ಈ ವಂಶದ ಸಂಸ್ಥಾಪಕ. ಪ್ರಭಾಕರವರ್ಧನ ಹಾಗೂ ಹರ್ಷವರ್ಧನರು ಈ ಮನೆತನದ ಪ್ರಮುಖ ದೊರೆಗಳು.
• ಹರ್ಷನ ತಂದೆಯಾದ ಪ್ರಭಾಕರವರ್ಧನ ಹಾಗೂ ಸೋದರನಾದ ರಾಜ್ಯವರ್ಧನನ ಮರಣದ ನಂತರ ಇವನು ಥಾಣೇಶ್ವರದ ಅಧಿಪತಿಯಾದನು. ಇವನ ಸೋದರಿ ರಾಜ್ಯಶ್ರಿಯನ್ನು ಕನೋಜಿನ ರಾಜನಿಗೆ ಕೊಟ್ಟು ಮದುವೆಮಾಡಿದನು.
• ಬಂಗಾಳದ ದೊರೆಯಾದ ಶಶಾಂಕನು ಕನೋಜಿನ ದೊರೆಯನ್ನು ಕೊಂದ ನಂತರ ಹರ್ಷನು ಕನೋಜನ್ನು ವಶಪಡಿಸಿಕೊಂಡನು.
• ಬಂಗಾಳದ ರಾಜನ ಮೇಲೆ ದಂಡೆತ್ತಿಹೋದನು. ಬಂಗಾಳ ಹಾಗೂ ಮಗಧ ಇವನ ಆಳ್ವಿಕೆಗೆ ಒಳಪಟ್ಟವು. ಆದರೆ ದಕ್ಷಿಣದಲ್ಲಿನ ನರ್ಮದಾ ನದಿಯನ್ನು ದಾಟಲು ಅವನಿಗೆ ಸಾಧ್ಯವಾಗಲಿಲ್ಲ.
• ಚಾಲುಕ್ಯರ ಕನ್ನಡದ ದೊರೆ ಎರಡನೇ ಪುಲಿಕೇಶಿಯು ಇವನ ಅತಿಕ್ರಮಣವನ್ನು ಅಲ್ಲಿಯೇ ತಡೆದನು. ಹರ್ಷವರ್ಧನನನ್ನು ಈ ಮೂಲಕ ಪುಲಿಕೇಶಿಯು ಹಿಮ್ಮೆಟ್ಟಿಸಿದನು.
• ಇವನ ಈ ಸಾಧನೆಯು ಪುಲಿಕೇಶಿಯ ಆಸ್ಥಾನ ಕವಿಯಾದ ರವಿಕೀರ್ತಿಯು ರಚಿಸಿದ ಪ್ರಶಸ್ತಿಯೊಂದರ ವಿವರಣೆಯಲ್ಲಿ ವ್ಯಕ್ತವಾಗಿದೆ.
• ಪುಲಿಕೇಶಿಯ ವಿರುದ್ಧ ಪರಾಭವಗೊಂಡ ಹರ್ಷನ ಹರ್ಷವನ್ನು ಇದು ಇಂಗಿಸಿತೆಂದು ಅತ್ಯಂತ ರಂಜನೀಯವಾಗಿ ರವಿಕೀರ್ತಿಯು ವ್ಯಕ್ತಪಡಿಸಿದ್ದಾನೆ.
• ರಾಜನ ಆಳ್ವಿಕೆಯಲ್ಲಿ ಮಂತ್ರಿಮಂಡಲವು ಸಹಕರಿಸುತ್ತಿತು. ಮಹಾಸಂಧಿವಿಗ್ರಹ (ಅನುಸಂಧಾನಗಳನ್ನು ಮಾಡುವವ), ಮಹಾಬಲಾಧಿಕೃತ (ಮಹಾಸೇನಾಪತಿ), ಭೋಗಪತಿ (ಕಂದಾಯ ಅಧಿಕಾರಿ), ದೂತ ಮುಂತಾದವರಿಂದ ಅಧಿಕಾರ ವರ್ಗವು ಕೂಡಿತ್ತು.
• ರಾಜ್ಯವು ಪ್ರಾಂತ್ಯಗಳಾಗಿ ವಿಂಗಡಿಸಲ್ಪಟ್ಟಿತ್ತು. ಭೂಕಂದಾಯವೇ ರಾಜ್ಯದ ಮುಖ್ಯ ಆದಾಯವಾಗಿತ್ತು. ಸಾಮಂತ ರಾಜರುಗಳು ಇವನಿಗೆ ಕಪ್ಪವನ್ನು ಕೊಡುತ್ತಿದ್ದರು.
• ರಾಜನು ಇವರಿಗೆ ಭೂಮಿಯನ್ನು ಕೊಡುಗೆಯಾಗಿ ಕೊಟ್ಟು ಪ್ರತಿಯಾಗಿ ಸೈನ್ಯದ ಸಹಾಯವನ್ನು ಪಡೆಯುತ್ತಿದ್ದನು. ಅರಸನು ದುರ್ಬಲಗೊಂಡಾಗ ಸಾಮಂತರು ಸ್ವತಂತ್ರರಾದರು.
• ಭೂದಾನವನ್ನು ಇತರೆ ಸಮುದಾಯಗಳಿಗೆ ಹಾಗೂ ಧರ್ಮದವರಿಗೆ ನೀಡಲಾಗುತ್ತಿತ್ತು.
• ಹರ್ಷನು ಬೌದ್ಧ ಧರ್ಮಕ್ಕೆ ಪ್ರಾಶಸ್ತ ಯವನ್ನು ನೀಡಿದ್ದನು. ಈ ಕಾಲದಲ್ಲಿಯೂ ವ್ಯಾಪಕವಾಗಿದ್ದ ಬೌದ್ಧಧರ್ಮದ ವಿವರಣೆಯನ್ನು ಹ್ಯೂಯನ್ತ್ಸಾಂಗನ ಬರವಣಿಗೆಯಿಂದ ತಿಳಿಯಬಹುದು.
• ಬೌದ್ದರ ನಳಂದ ವಿಶ್ವವಿದ್ಯಾಲಯವು ಈ ಕಾಲದಲ್ಲಿ ಅತ್ಯಂತ ಚಟುವಟಿಕೆಯಿಂದ ಕೂಡಿತ್ತು. ಅದಕ್ಕೆ ರಾಜನ ಆಶ್ರಯವಿತ್ತು.
ಹರ್ಷವರ್ಧನ ಕ್ರಿಶ.606ರಿಂದ 646
• ಕನೂಜ್ ರಾಜಧಾನಿ (ಕನೂಜಿನ ವರ್ಧನರು (ಕ್ರಿ.ಶ.550 -646) ಸ್ಥಾಣೇಶ್ವರ ರಾಜ್ಯದ ಪುಷ್ಯಭೂತಿ ವರ್ಧನ ಸಾಮ್ರಾಜ್ಯದ ಸ್ಥಾಪಕ.
• ಇದು ಹರ್ಷವರ್ಧನ ಕಾಲದಲ್ಲಿ ಮಹಾಸಾಮ್ರಾಜ್ಯವಾಗಿ ರೂಪುಗೊಂಡಿತು, ಹರ್ಷವರ್ಧನ ಅಧಿಕಾರಕ್ಕೆ ಬಂದನಂತರಸರ್ಪಶಕಿ ಎಂಬ ಹೊಸ ಶಕೆಯನ್ನು ಆರಂಭಿಸಿದನು.
• ಈತ ಲಾದಿತ್ಯ, ರಾಜಮತ್ರ ಎಂಬ ಬಿರುದುಗಳನ್ನು ಪಡೆದಿದ್ದನು. ಕೇಶ್ವರದ ರಾಜ್ಯ ಹರ್ಷನ ಕಾಲದಲ್ಲಿ ಒಂದು ಬೃಹತ್ ಸಮಾಜವಾಗಿ ಬೆಳೆಯಿತು. ಇಡೀ ಉತ್ತರಭಾರತವೇ ಹರ್ಷ ಖಾಮಜವಾಯಿತು, ದಕ್ಷಿಣ ಭಾರತದ ಶಾಸನಗಳು ಹರ್ಷನನು.
• ತರಭಾರತದ ಚಕ್ರವರ್ತಿಯೆಂದು ಘೋಷಿಸುತ್ತವೆ. ಪರ್ಷನ ಸಮಾಜವು ಪಶ್ಚಿಮದಲ್ಲಿ ಸೌರಾಷ್ಟ್ರದಿಂದ ಹಿಡಿದು ಪೂರ್ವದಲ್ಲಿ ತಾಮರೂಪದ (ಆಸ್ಸಾಂದವರೆಗೂ) ವಿಸ್ತರಿಸಿತ್ತು. ನರ್ಮದಾನದಿ ಇತಿಣದ ಗಡಿಯಾದರೆ ಉತ್ತರದಲ್ಲಿ ಕಾಶ್ಮೀರದವರೆಗೆ ವಿಸ್ತರಿಸಿದ್ದಿತು.
ಹರ್ಷವರ್ಧನನ ಧಾರ್ಮಿಕ ನೀತಿ
ಹರ್ಷನು ತನ್ನ ಪ್ರಜೆಗಳಿಗೆ ಧಾರ್ಮಿಕ ಸ್ವಾತಂತ್ರ್ಯ ನೀಡಿದ್ದು ಎಲ್ಲ ಧರ್ಮಗಳನ್ನು ನಿಷ್ಪಕ್ಷಪಾತದಿಂದ ಕಾಣುತ್ತಿದ್ದ ತಾನು ಭೌದ್ದಧರ್ಮವನ್ನು ಅನುಸರಿಸಿದರೂ ಹಿಂದೂಗಳಿಗೂ ಪ್ರೋತ್ಸಾಹ ನೀಡಿದ್ದ.
ಕನೂಜಿನ ಧಾರ್ಮಿಕ ಸಮ್ಮೇಳನಗಳು
1.ಹರ್ಷನು ಕನ್ಯಾಕುಬ್ದದಲ್ಲಿ (ಕ್ರಿ.ಶ. 643ರಲ್ಲಿ ಧಾರ್ಮಿಕ ಸಮ್ಮೇಳನ ವ್ಯವಸ್ಥೆಗೊಳಿಸಿದನು. ಸಮ್ಮೇಳನದಲ್ಲಿ ಬೌದ್ದರು, ಬ್ರಾಹ್ಮಣರು ಆದಿಯಾಗಿ ನಾಡಿನ ಎಲ್ಲ ಜನರು ಭಾಗವಹಿಸಿದ್ದರು. ಹೂಯೆನ್ ತ್ಸಾಂಗ್ ಈ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದನು.
2.ಪ್ರಯಾಗ, ಗಂಗಾ-ಯಮುನಾ, ಸರಸ್ವತಿ ನದಿಗಳ ಸಂಗಮದ ಪುಣ್ಯಕ್ಷೇತ್ರ ಈ ಸಮ್ಮೇಳನದಲ್ಲಿ ಎಲ್ಲ ರಾಜರು ವಿದ್ವಾಂಸರು, ಪ್ರಯಾಗದ ಧಾರ್ಮಿಕ ಸಮ್ಮೇಳನ ಬ್ರಾಹ್ಮಣರು, ಜೈನರೂ ಸೇರಿದ್ದರು. ಸರ್ವಧರ್ಮಗಳಿಗೂ ಪ್ರಾಮುಖ್ಯತೆ ಕೊಟ್ಟಿದ್ದನು.
ಹೂಯೆನ್ ತ್ಸಾಂಗ್ ಪ್ರವಾಸ ಕ್ರಿಶ. 630-45)
• ಚೀನಾದ ಬೌದ್ದ ಪ್ರವಾಸಿಯಾದ ಡ್ಯೂಯೆನ್ ತ್ಸಾಂಗ್ ಪ್ರಾಚೀನ ಚೀನಾದ ರಾಜಧಾನಿಯಾದ ಸಿಯಾಪುದಿಂದ ಸಮರ್ಖಂಡ್ ಮಾರ್ಗವಾಗಿ ತಕ್ಷಶಿಲೆ ತಲುಪಿದನು. ಭೇದಗ್ರಂಥಗಳನ್ನು ಸಂಗ್ರಹಿಸಿ ಅಧ್ಯಯನ ಮಾಡುವುದು. ಇವನ ಉದ್ದೇಶವಾಗಿದಿತ್ತು.
• 643ರಲ್ಲಿ ಜರುಗಿದ ಪ್ರಯಾಗದ ಸರ್ವಧರ್ಮ ಸಮ್ಮೇಳನದಲ್ಲಿ ಪಾಲ್ಗೊಂಡು ವಿದ್ವಾಂಸರೊಂದಿಗೆ ಕುರಿತು ಮಹಾಯಾನ ಬೌದ್ಧ ಪಂಥದ ಗ್ರಂಥಗಳನ್ನು ಅಧ್ಯಯನ ಆರುವರ್ಷ ನೆಲೆಸಿ ಸಂಸ್ಕೃತ, ಪಾಲಿ, ಪ್ರಾಕೃತ್ ಭಾಷೆಗಳನ್ನು ವಿಮರ್ಶಾತ್ಮಕವಾಗಿ ಚರ್ಚಿಸುತ್ತಿದ್ದನು.
• ನಳಂದಾ ವಿ.ವಿ.ಯಲ್ಲಿ ಮಾಡಿ ಸುಮಾರು 650 ಹಸ್ತ ಪ್ರತಿಗಳನ್ನು ತಯಾರಿಸಿಕೊಂಡನು.ತಾನು ತಂಡು ಅನುಭವಿಸಿದ ಕಥನವನ್ನು ಸಿ.ಯುಕಿ ಎಂಬ ಗ್ರಂಥದಲ್ಲಿ ಬರೆದಿದ್ದಾನೆ.
ಹರ್ಷವರ್ಧನನು ಸಾಮ್ರಾಜ್ಯವನ್ನು
5 ಭಾಗಗಳಾಗಿ ವಿಂಗಂಡಿಸಲಾಗಿತ್ತು.
1. ಕನೂಜ್
2. ಮಿಥಿಲ
3. ಬಿಹಾರ
4. ಬಂಗಾಳ
5.ಪಂಜಾಬ
ಸಾಹಿತ್ಯ: • ಹರ್ಷನ ಕಾಲದಲ್ಲಿ ಬಾಣಭಟ್ಟ ಬರೆದ ಹರ್ಷಚರಿತೆಕಾದಂಬರಿ, ಇತ್ಯಾದಿ ಗ್ರಂಥಗಳನ್ನು ಬರೆದನು, ಹರ್ಷವರ್ಧನನು ತಾನೇ ಸಂಸ್ಕೃತದಲ್ಲಿ ಘನ ವಿದ್ವಾಂಸನಾಗಿದ್ದ ಈತ ರತ್ನಾವಳಿ ಪ್ರಿಯದರ್ಶಿಕಾ ಮತ್ತು ನಾಗಾನಂದ ಇವನು ರಚಿಸಿದ ಸಂಸ್ಕೃತ ನಾಟಕಗಳು.
• ವಿದೇಶಿ ಚೀನಿ ಪ್ರವಾಸಿಗರಾದ ಮ್ಯೂಯೆನ್ ತ್ಸಾಂಗನಸಿ.ಯು.ಕಿ ಮತ್ತು ಇತ್ಸಿಂಗ್ ನ ಪ್ರವಾಸ ಕಥನ ಮುಖ್ಯವಾದವುಗಳಾಗಿವೆ.
ನಲಂದ ವಿಶ್ವವಿದ್ಯಾಲಯ (ಕ್ರಿ.ಶ. 400 -1200)
• ಪ್ರಾಚೀನ ಭಾರತವು ಸುಪ್ರಸಿದ್ದ ವಿದ್ಯಾಕೇಂದ್ರಗಳ ಸಾಮ್ರಾಜ್ಯವಾಗಿತ್ತು.ತಕ್ಷಶಿಲೆ, ನಲಂದ, ವಲ್ಲಭೀ, ಓದಂಟಪುರಿ,ವಿಕ್ರಮಶೀಲಾ,ಕಂಚಿ, ಬಳ್ಳಿಗಾವೆ ಇವು ಪ್ರಾಚೀನ ಭಾರತದ ವಿಶ್ವವಿದ್ಯಾಲಯಗಳಿವೆ.
• ಇವುಗಳಲ್ಲಿ ನಲಂದ ವಿ.ವಿ.ಯು ಅಗ್ರಸ್ಥಾನ ಹೊಂದಿದ್ದು ನಲಂದಾವಿ.ವಿ.ಯು ಬಿಹಾರ ಪ್ರಾಂತ್ಯದ ಪಾಟಲೀಪುತ್ರದಿಂದ ಅಗ್ನೇಯಕ್ಕೆ40 ಮೈಲು ದೂರದಲ್ಲಿತ್ತು.
• ಈವಿದ್ಯಾಪೀಠವು ಗುಪ್ತರ ಅರಸಒಂದನೇ ಕುಮಾರಗುಪ್ತನಿಂದ ಆರಂಭವಾಯಿತು, ಹರ್ಷವರ್ಧನನಕಾಲದಲ್ಲಿ ಅದು ತನ್ನ ಉತ್ತುಂಗ ಕೀರ್ತಿಯ ಶಿಖರವನ್ನು ಮುಟ್ಟಿತು.
• ಪಾಂಡಿತ್ಯ ಪ್ರತಿಭಾಶಕ್ತಿ ಅದ್ವಿತೀಯವಾದುದಾಗಿತ್ತು, ಅವನ ಮೇಧಾಶಕ್ತಿ ನಲಂದ ವಿವಿಯ ಕುಲಪತಿಯು ಶೀಲಭದ್ರನಾಗಿದ್ದು ಈತನಘನವಿದ್ವತ್ತು ಎಷ್ಟಿತ್ತೆಂದರೆ ನಲಂದ ವಿ.ವಿ. ಒಂದ ಪಕ್ಷ ನಶಿಸಿದ ಹೇಳಲಾಗುತ್ತಿದ್ದೆಂದು ವಿವರಿಸಿದ್ದಾರೆ, ಹ್ಯೂಯೆನ್ ತ್ಸಾಂಗ್ (600ಪಕ್ಕದಲ್ಲಿ ಶೀಲಭದ್ರನೋರ್ವ ಉಳಿದರೆ ಸಾಕೆಂದು 664) ರಲ್ಲಿ ಶೀಲಭದ್ರನಿಂದ ಯೋಗಶಾಸ್ತ್ರವನ್ನು ಕಲಿತುಬೌದಗ್ರಂಥಗಳನ್ನು ನಕಲು ಮಾಡಿಕೊಂಡು ಒಯ್ದನು.
• ನಲಂದವನ್ನು ಕುರಿತು ಈ ರೀತಿ ವಿವರಿಸಿದ್ದಾನೆ. 6 ಅಂತಸ್ತುಗಳ ಭವನದಲ್ಲಿಎಂಟು ದೊಡ್ಡ ಹಜಾರಗಳು, ಮುನ್ನೂರು ಕೋಣೆಗಳು ಅವುಗಳನ್ನೆಲ್ಲ ಸುತ್ತುವರಿದ ಉಸ್ಪತಗೋಡೆಗಳು, ಮಹಡಿಗಳಕಿಟಕಿಗಳಿಂದ ಕಾಣಿಸುವ ಮನಮೋಹಕ ನಿಸರ್ಗಸೌಂದಯ್ಯ, ಭವ್ಯಸೊಬಗು ಅಧ್ಯಾಪಕರ ಮತ್ತು ವಿದ್ವಾಂಸರ ವಾಸಕ್ಕೆ ಪ್ರತ್ಯೇಕಮನೆಗಳು, ವಿಹಾರಗಳು, ಪಾಠಪ್ರವಚನಗಳು ಭೀರಗಾವ ನದೀತಟದಲ್ಲಿ ಪ್ರಶಾಂತತೆಯಿಂದ ಜ್ಞಾನದೀವಿಗೆಗಳಾಗಿ ರಂಜಿಸುತ್ತಿದ್ದವು.
• ಕ್ರೀಡಾಸ್ಥಳಗಳು, ಮುಖ್ಯೋಧ್ಯಾನಗಳು ವಿಹಾರವಾಟಿಕೆಗಳು ಒಂಬತ್ತುಸಭಾಂಗಣಗಳು ಮುನ್ನೂರು ತರಗತಿಗಳ ಭವ್ಯ ಭವನಗಳ ಪ್ರದೇಶದಲ್ಲಿ ಎಂಬತ್ತು ಅಡಿ ಎತ್ತರದ ಬುದ್ದನ ವಿಗ್ರಹವನ್ನುನಿರ್ಮಿಸಲಾಗಿತ್ತು.
• ಸಾಹಿತ್ಯ, ಕಲೆ, ವಿಜ್ಞಾನ, ಅಥರ್ವವೇದ ಸಾಂಖ್ಯ,ವೇದಾಂತ, ಚಿಕಿತ್ಸಾವಿಧ್ಯೆ, ಯೋಗ ಮುಂತಾದ ವಿಷಯಗಳವ್ಯಾಸಂಗಕ್ಕೆ ಪ್ರಾಧಾನವಿದ್ದಿತ್ತು, ರತ್ನರಂಜಕ, ರತ್ನಸಾಗರ ರತ್ನದೋದಿಎಂಬ ಪ್ರತ್ಯೇಕ ಗ್ರಂಥಾಲಯ ಭವನಗಳು ಭವ್ಯತೆ ಹಾಗೂ ಸೌಂದರ್ಯದಲ್ಲಿ ಅವುಗಳ ಹೆಸರಿಗನುರೂಪವಾಗಿದ್ದವು. ಗ್ರಂಥಾಲಯ ಕೇಂದ್ರವು ಧರ್ಮಗಂಜ್ ಎಂಬ ಕ್ಷೇತ್ರದಲ್ಲಿತ್ತು.
• ನಲಂದಾ ಎ.ವಿ.ಯಲ್ಲಿ ಸುಮಾರು ಹತ್ತು ಸಾವಿರ ವಿದ್ಯಾರ್ಥಿಗಳಿದ್ದು, ಎಲ್ಲರಿಗೂ ಉಚಿತ ಊಟ ವಸತಿ ಇತರ ಸೌಕರ್ಯಗಳು ದೊರೆಯುತ್ತಿದ್ದವು.
• ಸಹಶಿಕ್ಷಣವಿದ್ದು ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ವಸತಿ ಒದಗಿಸಲಾಗಿತ್ತು, ನಲಂದಾ ಪೀಠವು ಅರಸರ ಅಥವಾ ಜನತೆ೦ತು ಹತೋಟಿಗೊಳಪಡದ ಸ್ವತಂತ್ರವಾದ ಅಸ್ತಿತ್ವವುಳ್ಳದಾಗಿದ್ದಿತ್ತು.
• ಅದರ ಕುಲಪತಿಯನ್ನು ಅಖಿಲಭಾರತ ವಿದ್ವಾಂಸರ ಸಮೂಹವು ಚುನಾಯಿಸುತ್ತಿತ್ತು ಯಾವ ಬೇಧ ಭಾವವಿಲ್ಲದೆ ಪ್ರತಿಯೊಬ್ಬರಿಗೂ ಶಿಕ್ಷಣ ಕೊಡುವ ಕ್ರಮವಿತ್ತು ಪ್ರತಿದಿನ 150 ಮಂದಿ ಅದ್ಯಾಪಕರ ಮೇಲ್ವಿಚಾರಣೆಯಲ್ಲಿ ನೂರಕ್ಕೂ ಹೆಚ್ಚು ವಿಚಾರಗೋಷ್ಠಿಗಳಿರುತ್ತಿದ್ದವು.
• ಕ್ರಿ.ಶ.1200ರಲ್ಲಿ ಬಬ್ಲಿಯಾರ್ ಏಲ್ಲಿಯ ದಾಳಿಗೆ ತುತ್ತಾದ ವಿದ್ಯಾಪೀಠವು ಕುಸಿಯಿತು, ಒಟ್ಟಿನಲ್ಲಿ ಭಾನೇಶ್ವರ ಹರ್ಷನ ಮೊದಲ ರಾಜಧಾನಿಯಾಗಿತ್ತು.
• ನಂತರದ ರಾಜಧಾನಿ ಕನೋಜ, ಫಯಾಗವು ಕುಂಭಮೇಳಗಳ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕೇಂದ್ರವಾಗಿತ್ತು. ಕಾಶಿ ಹಿಂದೂ ವಿದ್ಯಾಪೀಠಕ್ಕೆ ರೂಪುಗೊಂಡರೆ ನಲಂದ ಬೌದ್ಧ ವಿ.ವಿಗೆ ಪ್ರಸಿದ್ಧಿ ಹೊಂದಿತ್ತು.
• ಬುದ್ಧ ಗಯಾ, ಮಹಾಯಾನ ಪಂಥದ ಪ್ರಮುಖ ಕೇಂದ್ರವಾಗಿ ಬೆಳೆಯಿತು.
• ಪ್ರಾಚೀನ ಕಾಜಧಾನಿಗಳಾದ ಬಾಟಲಿಪುತ್ರ ಉಜ್ಜಿನಿ ವಲ್ಲಭ ಪ್ರಸಿದ್ಧ ವಾಣಿಜ್ಯ ಕೇಂದ್ರಗಳಾಗಿದ್ದವು.
ಕ್ವಿಜ್ :
ಗುಪ್ತ ಸಾಮ್ರಾಜ್ಯ
1. ಗುಪ್ತರ ರಾಜವಂಶದ ಸ್ಥಾಪಕರು ಯಾರು?
A) ಚಂದ್ರಗುಪ್ತ
B) ಘಟೋಟ್ಕಾಚಾ
C) ಶ್ರೀ ಗುಪ್ತಾ✔✔
D) ಸಮುದ್ರಗುಪ್ತ
2. ಗುಪ್ತರ ರಾಜವಂಶದ ಯಾವ ರಾಜನನ್ನು ಭಾರತದ ನೆಪೋಲಿಯನ್ ಎಂದು ಕರೆಯಲಾಗುತ್ತಿತ್ತು?
(ಎ) ಸಮುದ್ರಗುಪ್ತ,✔✔
(ಬಿ) ಚಂದ್ರಗುಪ್ರ ವಿಕ್ರಮಾದಿತ್ಯ,
(ಸಿ) ಶ್ರೀಗುಪ್ತ,
D) ಚಂದ್ರಗುಪ್ಪ I
3. ಯಾವ ಗುಪ್ತರ ರಾಜ ಆಳ್ವಿಕೆಯ ಸಂದರ್ಭದಲ್ಲಿ ಚೀನೀ ಪ್ರವಾಸಿ ಫ್ಯಾಹಿಯನ್ ಭಾರತಕ್ಕೆ ಭೇಟಿ ನೀಡಿದರು?
(ಎ) ಚಂದ್ರಗುಪ್ಪ I,
(ಬಿ) ಚಂದ್ರಗುಪ್ಪ II,✔✔
(ಸಿ) ಸಮುದ್ರಗುಪ್ತ,
(ಡಿ) ಕುಮಾರಗುಪ್ತ
4. *ಕವಿರಾಜ* ಎಂಬ ಬಿರುದನ್ನು ಹೊಂದಿದ್ದ ಗುಪ್ತರ ಅರಸ ಯಾರು?
A) ಸಮುದ್ರ ಗುಪ್ತ✔✔
B) ಚಂದ್ರ ಗುಪ್ತ II
C) ಕುಮಾರ ಗುಪ್ತ
D) ಚಂದ್ರ ಗುಪ್ತ I
5. ಸಮುದ್ರ ಗುಪ್ತನನ್ನು ಸೋಲಿಸಿದ ಕೊಸಳ ರಾಜ?
ಎ) ಉದಯನ್
ಬಿ) ಮಹೇಂದ್ರ✔✔
ಸಿ) ಕಲಾಶೋಕ
ಡಿ) ಮೇಲಿನ ಎಲ್ಲಾ
6. ಚಂದ್ರ ಗುಪ್ತ I ನ ಪತ್ನಿ ಧೃವಾದೇವಿ ಈ ಕುಟುಂಬಕ್ಕೆ ಸೇರಿದವಳು?
ಎ) ಕುರು
ಬಿ) ಪಾಂಚಾಲ
ಸಿ) ಲಿಚ್ಛವಿ✔✔
ಡಿ) ಅಂಗ
7. ಸಮುದ್ರಗುಪ್ತನ ಮಗ ಯಾರು?
ಎ) ಚಂದ್ರ ಗುಪ್ತ II ( ವಿಕ್ರಮಾದಿತ್ಯ) ✔✔
ಬಿ) ಕುಮಾರ ಗುಪ್ತ
C) ವಿಷ್ಣು ಗುಪ್ತ
D) ಸ್ಕಂದ ಗುಪ್ತ
8. ಸತಿ ಪದ್ಧತಿಯ ಬಗ್ಗೆ ತಿಳಿಸುವ ಗುಪ್ತರ ಶಾಸನ ಯಾವುದು?
ಎ) ಜುನಾಗರ್ ಶಾಸನ
ಬಿ) ಅಲಹಾಬಾದ್ ಶಾಸನ
C) ಭಿತರಿ ಶಾಸನ
ಡಿ) ಇರಾನ್ ಶಾಸನ (ERAN)✔✔
9. ಗುಪ್ತರಿಂದ ಪೋಷಿಸಲ್ಪಟ್ಟ ಭಾಷೆ ಯಾವುದು?
ಎ) ಸಂಸ್ಕೃತ ✔✔
B) ಪ್ರಕೃತಿ
ಸಿ) ಅರೇಬಿಕ್
D) ಹಿಂದಿ
10. ಗುಪ್ತರ ಅವಧಿಯಲ್ಲಿ ಗ್ರಾಮದ ಅಧಿಕಾರಿಗಳು ಇದ್ದರು
ಎ) ಉಪಕಾರಿ
B) ಗ್ರಾಮಿಕ್ ಮತ್ತು ಭೋಜಕ್✔✔
ಸಿ) ಕೋಟ್ವಾಲ್
ಡಿ) ವಿಶಾಪತಿ
11. ಸಮುದ್ರ ಗುಪ್ತವನ್ನು ಭಾರತದ ನೆಪೋಲಿಯನ್ ಎಂದು ಕರೆದ ಇತಿಹಾಸಕಾರ ಯಾರು?
ಎ) ದಯಾನಂದ
ಬ) ಮಾರ್ಷಲ್
ಸಿ) ವಿ.ಎ. ಸ್ಮಿತ್✔✔
ಡಿ) ಡಿ.ಎನ್. ಆಚಾರ್ಯ
12. ಗುಪ್ತ ಸಾಮ್ರಾಜ್ಯದ ನಿಜವಾದ ಸ್ಥಾಪಕ ಎಂದು ಯಾರನ್ನು ಕರೆಯುವರು?
A. ಚಂದ್ರಗುಪ್ತ I ✔✔
B. ಶ್ರೀ ಗುಪ್ತ
C. ಸಮುದ್ರಗುಪ್ತ
D.ಕುಮಾರಗುಪ್ತ
13. ಗುಪ್ತರ ಯಾವ ಶಾಸನವು ಕಬ್ಬಿಣದ ಕಂಬದ ಮೇಲೆ ಕಂಡುಬಂದಿತ್ತು?
ಎ) ಸರನಾಥ್
ಬಿ) ಮೆಹ್ರಾಲಿ ✔✔
C) ಬಾಬ್ರು
ಡಿ) ಸಾಂಚಿ
14. ಕಾಳಿದಾಸ ಬರೆದ ನಾಟಕಗಳು
ಎ) ವಿಕ್ರಮೋರ್ವಶೀಯಂ
ಬೌ) ಅಭಿಜಾನ ಶಾಕುಂತಲಮ್
ಸಿ) ಮಾಲ್ವಿಕಾಗ್ನಿಮಿತ್ರಮ್
ಡಿ) ಮೇಲಿನ ಎಲ್ಲಾ ✔✔
15. ಬ್ರಹ್ಮಸಂಹಿತಾ ಬರೆದವರು ಯಾರು?
ಎ) ವರಾಹಮಿಹಿರಾ✔✔
ಬಿ) ಆರ್ಯಭಟ್ಟಾ
C) ಬ್ರಹ್ಮ ಗುಪ್ತ
ಡಿ) ಭಾಸ್ಕರ
16. ಗುಪ್ತರ ಕಾಲದಲ್ಲಿ ಜವಳಿ ಉದ್ಯಮಕ್ಕೆ ಪ್ರಸಿದ್ಧವಾದ ಪಟ್ಟಣ ಯಾವುದು?
ಎ) ವಾರಣಾಸಿ
ಬಿ) ಪಾಟಲಿಪುತ್ರ
ಸಿ) ಸುರತ್✔✔
ಡಿ) ಕನಜ್
17.ಅಲಹಾಬಾದ್ ಸ್ತಂಭ ಶಾಸನವು ಈ ಲಿಪಿಯಲ್ಲಿದೆ?
A) ಅರಾಬಿಕ್
ಬಿ) ದೇವನಾಗರಿ
ಸಿ) ಖರೋಷ್ಠಿ
D) ಬ್ರಾಹ್ಮಿ✔✔
18. ಮೊದಲ ಬಾರಿಗೆ ಹೂಣರ ದಾಳಿ ಈ ಗುಪ್ತ ಅರಸನ ಕಾಲದಲ್ಲಿ ನಡೆಯಿತು?
ಎ) ಶ್ರೀಗುಪ್ತ
ಬಿ) ಕುಮಾರಗುಪ್ತ✔✔
ಸಿ) ಚಂದ್ರಗುಪ್ತ II
D) ಚಂದ್ರಗುಪ್ತ I
19. ಗುಪ್ತರ ರಾಜಲಾಂಛನ ಯಾವುದು?
ಎ) ಗರುಡ✔✔
ಬಿ) ಹುಲಿ
C) ನಂದಿ
D) ಹಸು
20. ಉಜ್ಜೈನಿಯನ್ನು ಗುಪ್ತ ಸಾಮ್ರಾಜ್ಯದ ಎರಡನೇ ರಾಜಧಾನಿಯಾಗಿ ಮಾಡಿದ ಗುಪ್ತ ಅರಸ ಯಾರು?
ಎ) ಕುಮಾರ ಗುಪ್ತಾ
ಬಿ) ಚಂದ್ರ ಗುಪ್ತ II ವಿಕ್ರಮಾದಿತ್ಯ✔✔
ಸಿ) ಬುದ್ಧ ಗುಪ್ತ
ಡಿ) ಚಂದ್ರ ಗುಪ್ತ I
21.ರಾಮಾಯಣ ಮತ್ತು ಮಹಾಭಾರತ ಯಾರ ಅವಧಿಯಲ್ಲಿ ರಚಿತವಾದವು?
ಎ) ಗುಪ್ತರು✔✔
ಬಿ) ಮೌರ್ಯರು
ಸಿ) ಕುಶಾಣರು
ಡಿ) ಹರ್ಷ
22. ಕಾಲಿದಾಸ ಸೇರಿದಂತೆ ನವರತ್ನರೆಂಬ ಒಂಬತ್ತು ಶ್ರೇಷ್ಠ ಕವಿಗಳನ್ನು ಹೊಂದಿದ್ದ ಗುಪ್ತ ರಾಜ?
ಎ) ಚಂದ್ರ ಗುಪ್ತ
ಬಿ) ಸ್ಕಂದ ಗುಪ್ತ
ಸಿ) ಸಮುದ್ರ ಗುಪ್ತ
D) ಚಂದ್ರ ಗುಪ್ತಾ II (ವಿಕ್ರಮಾದಿತ್ಯ)✔✔
23. ಕೆಳಗಿನವರಲ್ಲಿ ಅಶ್ವಮೇಧ ಯಾಗ ಮಾಡಿದ ಅರಸ ಯಾರು?
(ಎ) ಅಜಾತಶತ್ರು
(ಬ) ಅಶೋಕ
(ಸಿ) ಸಮುದ್ರಗುಪ್ತ,✔✔
(ಡಿ) ಚಂದ್ರಗುಪ್ತ
24. ಕೆಳಗಿನ ಸಾಹಿತ್ಯ ಕೃತಿಗಳನ್ನು ಪರಿಗಣಿಸಿ:
I. ಕುಮಾರ್ ಸಂಭವಮ್
II. ಮುದ್ರರಾಕ್ಷಸ
III. ರಘುವಂಶ
IV. ರಿತುಸಂಹಾರ
25.ಇವುಗಳಲ್ಲಿ ಕಾಳಿದಾಸನ ಕೃತಿಗಳು ಯಾವುವು?
(ಎ) I, II ಮತ್ತು III,
(ಬಿ) II, III ಮತ್ತು IV,
(ಸಿ) I, III ಮತ್ತು IV,✔✔
(ಡಿ) I, II ಮತ್ತು IV
25. ವಿಕ್ರಮಾದಿತ್ಯ ಎಂಬ ಬಿರುದನ್ನು ಹೊಂದಿದ್ದ ದೊರೆ ಯಾರು?
(ಅ) ಅಶೋಕ,
(ಬಿ) ಚಂದ್ರಗುಪ್ಪ II,✔✔
(ಸಿ) ಕನಿಶ್ಶ,
(ಡಿ) ಸಮುದ್ರಗುಪ್ತ
26. ಗಯಾದಲ್ಲಿ ಬುದ್ಧ ದೇವಾಲಯವೊಂದನ್ನು ನಿರ್ಮಿಸಲು ಶ್ರೀಲಂಕಾದ ಆಡಳಿತಗಾರನಾದ ಮೇಘವರ್ಮಾರಿಗೆ ಈ ಕೆಳಗಿನ ಗುಪ್ತರ ಯಾವ ಅರಸ ಅನುಮತಿ ನೀಡಿದರು?
(ಎ) ಚಂದ್ರಗುಪ್ತ I,
(B) ಸಮುದ್ರಗುಪ್ತ,✔✔
(ಸಿ) ಚಂದ್ರಗುಪ್ಪ II,
(ಡಿ) ಸ್ಕಂದಗುಪ್ತಾ
27. ಸಮುದ್ರಗುಪ್ತನ ಆಳ್ವಿಕೆಯ ಅವಧಿ?
(ಎ) 335-380 AD.✔✔
(B) 380-413 AD.
(ಸಿ) 413-455 AD.
(ಡಿ) 319-335 AD .
28. ಕೆಲವು ನಾಣ್ಯಗಳಲ್ಲಿ ವೀಣಾ ಎಂಬ ಸಂಗೀತ ವಾದ್ಯ ನುಡಿಸುತ್ತಿರುವ ಗುಪ್ತ ಅರಸ ಯಾರು?
(ಎ) ಚಂದ್ರಗುಪ್ತ-I
(ಬಿ) ಸ್ಕಂದಗುಪ್ತ
(ಸಿ) ಕುಮಾರಗುಪ್ತ-I
(ಡಿ) ಸಮುದ್ರಗುಪ್ತ✔

Also Read :




BookS


No comments:

Post a Comment