Saturday, 13 October 2018

ಕಣ್ಣು

ಕಣ್ಣು ನಮ್ಮ ಜಗತ್ತು ಇಂತಹ ಕಣ್ಣಿಗೆ ಏನಾದ್ರು ಆದ್ರೆ ನೆಗ್ಲೆಟ್ ಮಾಡಬೇಡಿ ಕಣ್ಣು ಉರಿ ಸಮಸ್ಯೆಯೆಗೆ ಸೂಕ್ತ ಪರಿಹಾರ..!
ನಿಮಗೆ ಕಣ್ಣುಗಳ ಉರಿತದ ಸಮಸ್ಯೆಯೇ ಹಾಗಾದರೆ ನಿಮ್ಮ ಮನೆಯಲ್ಲಿಯೇ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ,
ಮನೆಯಲ್ಲಿ ಹೆಸರು ಕಾಳು ಇದ್ದರೆ ಕಾಳನ್ನು ಪುಡಿ ಮಾಡಿ ನೀರಲ್ಲಿ ಕಲಸಿ ಮುಖ ಮತ್ತು ರೆಪ್ಪೆಗೆ ಲೇಪ ಮಾಡಿದರೆ ಕಣ್ಣುಗಳ ಉರಿ ಕಡಿಮೆಯಾಗುತ್ತದೆ.
ಕಣ್ಣು ಉರಿ ಇದ್ದಾಗ ಬಸಳೆ ಸೊಪ್ಪಿನ ರಸಕ್ಕೆ ಬೆಣ್ಣೆ ಹಾಕಿ ಕಲಸಿ ಅದನ್ನು ಹತ್ತಿಯಲ್ಲಿ ಅದ್ದಿ ಕಣ್ಣುಗಳ ಮೇಲೆ ಇಟ್ಟುಕೊಂಡರೆ ಕಣ್ಣಿನ ಉರಿ ಕಡಿಮೆಯಾಗುತ್ತದೆ.
ಶ್ರೀಗಂಧವನ್ನು ರೋಸ್‌ವಾಟರ್‌ನಲ್ಲಿ ಕಲಸಿ ರೆಪ್ಪೆಗಳ ಮೇಲೆ ಹಚ್ಚಿ ಸ್ವಲ್ಪ ಹೊತ್ತಿನ ನಂತರ ತೊಳೆದರೆ ಕಣ್ಣುಗಳ ಉರಿ ಕಡಿಮೆಯಾಗುತ್ತದೆ.
ಕೊತ್ತಂಬರಿ ಬೀಜದಿಂದ ಕಷಾಯ ಮಾಡಿ ಅದರಲ್ಲಿ ಹತ್ತಿಯಲ್ಲಿ ನೆನೆಸಿ ಆ ಹತ್ತಿಯನ್ನು ಕಣ್ಣುಗಳ ಮೇಲೆ ಇಟ್ಟರೆ ಕಣ್ಣುಗಳ ಉರಿ ಕಡಿಮೆಯಾಗುತ್ತದೆ.
ಗರಿಕೆಯನ್ನು ಪೇಸ್ಟ್‌ ಮಾಡಿ ಅದನ್ನು ರಾತ್ರಿ ಮಲಗುವ ಮುನ್ನ ಕಣ್ಣಿನ ರೆಪ್ಪೆ ಮೇಲೆ ಲೇಪ ಮಾಡಿ 1 ಗಂಟೆ ಬಿಟ್ಟು ತೊಳೆದರೆ ಕಣ್ಣು ಉರಿ ನಿವಾರಣೆಯಾಗುತ್ತದೆ.
ನುಗ್ಗೆ ಸೊಪ್ಪನ್ನು ಅರೆದು ಸೋಸಿ ಆ ರಸವನ್ನು ಕಣ್ಣಿನ ರೆಪ್ಪೆ ಮೇಲೆ ಹಚ್ಚಿದರೆ ಕಣ್ಣುಗಳ ಉರಿ ಕಡಿಮೆಯಾಗುತ್ತದೆ.
ಸೌತೆ ಕಾಯಿಯನ್ನು ದುಂಡಾಗಿ ಕತ್ತರಿಸಿ ಕಣ್ಣಿನ ರೆಪ್ಪೆ ಮೇಲೆ ಇಟ್ಟುಕೊಂಡು ಮಲಗಿದರೆ ಕಣ್ಣು ಉರಿ ಕಡಿಮೆಯಾಗುತ್ತದೆ.
ಹೀಗೆ ಹಲವಾರು ಮನೆಯಲ್ಲಿರುವ ಪದಾರ್ಥಗಳಿಂದಲೇ ಕಣ್ಣಿನ ಉರಿ ಕಡಿಮೆ ಮಾಡಿಕೊಳ್ಳಬಯುದಾಗಿದೆ.

Also Read :




No comments:

Post a Comment