Saturday, 20 October 2018

ಕರ್ನಾಟಕದ ಒಂದು ಪಕ್ಷಿನೋಟ

ಕರ್ನಾಟಕದ ಒಂದು ಪಕ್ಷಿನೋಟ ★★★
=> ರಾಜ್ಯಪಕ್ಷಿ - ನೀಲಕಂಠ(ಇಂಡಿಯನ್ ರೋಲರ್)
=> 
ರಾಜ್ಯ ಪ್ರಾಣಿ - ಆನೆ.
=> 
ರಾಜ್ಯ ವೃಕ್ಷ - ಶ್ರೀಗಂಧ.
=> 
ರಾಜ್ಯಪುಷ್ಪ - ಕಮಲ
=> 
ನಾಡಗೀತೆ - ಜಯಭಾರತ ಜನನಿಯ ತನುಜಾತೆ(ಕುವೆಂಪು ರಚಿತ)
=> 
ಕರ್ನಾಟಕ ಸರ್ಕಾರದ ಚಿನ್ಹೆ - ಗಂಡಭೇರುಂಡ
=> 
ಗಂಡಭೇರುಂಡ ಎರಡು ತಲೆಗಳನ್ನು ಹೊಂದಿರುವ ಕಾಲ್ಪನಿಕ ಪಕ್ಷಿಯಾಗಿದೆ.
=> 
ಭಾರತದಲ್ಲಿ ಅತಿ ಹೆಚ್ಚು ಶ್ರೀಗಂಧದ ಮರಗಳನ್ನು ಬೆಳೆಯುವ ರಾಜ್ಯ - ಕರ್ನಾಟಕ
=> 
ಕರ್ನಾಟಕದ ಮೊದಲ ನಾಡಗೀತೆ - ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು(ಹುಯಿಲಗೋಳ್ ನಾರಾಯಣರಾವ)
=> 
ಕರ್ನಾಟಕ ಚಲನಚಿತ್ರ ಮಂಡಳಿಯ ಹೆಸರು - ಸ್ಯಾಂಡಲವುಡ್.
=> 
ಕರ್ನಾಟಕ ದ್ವಿಸದನ ವ್ಯವಸ್ಥೆ ಹೊಂದಿದೆ.
=> 
ವಿಧಾನಸಭೆಯ ಸದಸ್ಯರ ಸಂಖ್ಯೆ - 225.
=>
ವಿಧಾನ ಪರಿಷತ್ತ ಸದಸ್ಯರ ಸಂಖ್ಯೆ - 75
=> 
ಕರ್ನಾಟಕದಿಂದ ಲೋಕಸಭೆಗೆ ಆಯ್ಕೆಯಾಗುವ ಸಂಸದರ ಸಂಖ್ಯೆ - 28
=> 
ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗುವ ಸಂಸದರ ಸಂಖ್ಯೆ - 12
=> 
ಭಾರತದಲ್ಲಿಯೇ ಪ್ರಥಮಬಾರಿಗೆ ಹಿಂದುಳಿದ ವರ್ಗಗಳ ಆಯೋಗವೊಂದನ್ನು ನೇಮಿಸಿದ್ದು ಮೈಸೂರು ರಾಜ್ಯ - 1918 ರಲ್ಲಿ ಮಿಲ್ಲರ ಆಯೋಗ.
=> 
ಮೊದಲ ರಾಜ್ಯಪಾಲ - ಜಯಚಾಮರಾಜೇಂದ್ರ ಒಡೆಯರ್
=> 
ಮೊದಲ ಮುಖ್ಯಮಂತ್ರಿ - ಕೆ.ಚಂಗಲರಾಯರೆಡ್ಡಿ.
=> 
ಏಕೀಕೃತ ಕರ್ನಾಟಕದ ಮೊದಲ ಮುಖ್ಯಮಂತ್ರಿ - ಎಸ್,ನಿಜಲಿಂಗಪ್ಪ
=> 
ವಿಧಾನಸಭೆಯ ಮೊದಲ ಸಭಾಪತಿ - ವಿ,ವೆಂಕಟಪ್ಪ
=> 
ವಿಧಾನಸಭೆಯ ಏಕೈಕ ಮಹಿಳಾ ಸಭಾಪತಿ - ಕೆ.ಎಸ್.ನಾಗರತ್ನಮ್ಮ
=> 
ಕರ್ನಾಟಕ ಹೈಕೋರ್ಟಿನ ಮೊದಲ ಮುಖ್ಯ ನ್ಯಾಯಧೀಶ - ಆರ್ , ವೆಂಕಟರಾಮಯ್ಯ.
=> 
ಭಾರತದ ಉಪಗ್ರಹ ನಿಯಂತ್ರಣ ಕೇಂದ್ರವಿರಿವುದು - ಹಾಸನದಲ್ಲಿ
=> 
ಕಾಫಿ ಹಾಗೂ ಮೆಣಸು ಉತ್ಪಾದನೆಯಲ್ಲಿ ಕರ್ನಾಟಕವು - ಪ್ರಥಮ ಸ್ಥಾನದಲ್ಲಿದೆ.

ಪ್ರಮುಖ ಜಲಪಾತಗಳು*

ಪ್ರಮುಖ ಜಲಪಾತಗಳು*
1. ಶರಾವತಿ " ಜೋಗ ಜಲಪಾತ "
2. 
ಗಂಗವಳ್ಳಿ " ಮಾಗೋಡು ಜಲಪಾತ "
3. 
ಮಹದಾಯಿ' "ಕಳಸ ಜಲಪಾತ "
4. 
ಘಟಪ್ರಭಾ " ಗೋಕಾಕ್ ಜಲಪಾತ "
5. 
ಅಗನಾಶಿನಿ " ಊಂಚಳ್ಳಿ ಜಲಪಾತ "
6. 
ಶಿಂಷಾ ನದಿ ( ಕಾವೇರಿ) "ಗಗನಚುಕ್ಕಿ ಬರಚುಕ್ಕಿ"
7. 
ಲಕ್ಷ್ಮಣತೀರ್ಥ (ಕಾವೇರಿ )"ಇರ್ಪು ಜಲಪಾತ " ಅಬ್ಬಿ ಜಲಪಾತ
8. 
ಮಾವಿನ ಪಾಸಿನದಿಎಳನೀರು ಜಲಪಾತ "
9. 
ಬಾಬಬುಡನ್ ಗಿರಿ ಬೆಟ್ಟದಲ್ಲಿ " ಹೆಬ್ಬಿ ಜಲಪಾತ " ಮಾಣಿಕ್ಯಧಾರಾ"
10. 
ಶಿವಮೊಗ್ಗ ಜಿಲ್ಲೆಯ "ದಬ್ಬೆ ಜಲಪಾತ "

ಸಮಾಸಗಳು (samaasagalu)

ಸಮಾಸಗಳು (samaasagalu)
━━━━━━━━━━━━━━━━━
ಎರಡು ಅಥವಾ ಹಲವು ಪದಗಳು ಒಂದು ಗೂಡಿ ಒಂದು ಶಬ್ಧವಾಗುವುದಕ್ಕೆ ಸಮಾಸ ಎಂದು ಹೆಸರು.
ಉದಾ:
ತಲೆಯಲ್ಲಿ (ಅಲ್ಲಿ) + (ನೋವು) ನೋವು=ತಲೆನೋವು
ಕಣ್ಣಿನಿಂದು(ಇಂದ)+(ಕುರುಡ)ಕುರುಡ=ಕಣ್ಣುಕುರುಡ
ವಿಗ್ರಹ ವಾಕ್ಯ
━━━━━━━━━━━━━━━━━
ಸಮಾಸದ ಅರ್ಥವನ್ನು ಬಿಡಿಸಿ ಹೇಳುವ ಮಾತುಗಳ ಗುಂಪಿಗೆ ವಿಗ್ರಹವಾಕ್ಯವೆಂದು ಹೆಸರು.
ಉದಾ:
ಸಮಸ್ತಪದ = ಪೂರ್ವಪದ + ಉತ್ತರ ಪದ
ದೇವಮಂದಿರ= ದೇವರ + ಮಂದಿರ
ಹೆಜ್ಜೇನು=ಹಿರಿದು + ಜೇನು
ಮುಂಗಾಲು= ಕಾಲಿನ + ಮುಂದು
(ಸಮಾಸದಲ್ಲಿ ಬರುವ ಮೊದಲನೆಯ ಪದವು ಪೂರ್ವ ಪದವೆಂದು, ಎರಡನೆಯ ಪದವನ್ನು ಉತ್ತರ ಪದವೆಂದು ಕರೆಯಲಾಗುತ್ತದೆ.)
ಸಮಾಸ ಪದಗಳಾಗುವ ಸನ್ನಿವೇಶಗಳು
━━━━━━━━━━━━━━━━━
1> ಸಂಸ್ಕೃತ-ಸಂಸ್ಕೃತ ಶಬ್ಧಗಳು ಸೇರಿ
2> ಕನ್ನಡ-ಕನ್ನಡ ಶಬ್ಧಗಳು ಸೇರಿ
3> ತದ್ಬವ-ತದ್ಬವ ಶಬ್ಧಗಳು ಸೇರಿ
4> ಅಚ್ಚಗನ್ನಡ ಶಬ್ಧ – ತದ್ಬವ ಶಬ್ಧಗಳು ಸೇರಿ ಸಮಾಸಪದಗಳಾಗುತ್ತವೆ.
ಆದರೆ ಕನ್ನಡಕ್ಕೆ – ಸಂಸ್ಕೃತ ಶಬ್ಧಗಳು ಸೇರಿ ಸಮಾಸವಾಗಲಾರದು.
━━━━━━━━━━━━━━━━━
ಸಮಾಸದ ವಿಧಗಳು
━━━━━━━━━━━━━━━━━
1> ತತ್ಪುರುಷ ಸಮಾಸ
2> ಕರ್ಮಧಾರೆಯ ಸಮಾಸ
3> ದ್ವಿಗು ಸಮಾಸ
4> ಅಂಶಿ ಸಮಾಸ
5> ದ್ವಂದ್ವ ಸಮಾಸ
6> ಬಹುವ್ರೀಹಿ ಸಮಾಸ
7> ಕ್ರಿಯಾ ಸಮಾಸ
8> ಗಮಕ ಸಮಾಸ
━━━━━━━━━━━━━━━━━
1> ತತ್ಪುರುಷ ಸಮಾಸ
ಎರಡು ನಾಮಪದಗಳು ಸೇರಿ ಸಮಾಸವಾದಾಗ ಉತ್ತರ ಪದದ ಅರ್ಥವು ಪ್ರಧಾನವಾಗಿ ಉಳ್ಳ ಸಮಾಸಕ್ಕೆ ತತ್ಪುರುಷ ಸಮಾಸ ಎಂದು ಹೆಸರು.
ಉದಾ:
ಮರದ+ಕಾಲು =ಮರಗಾಲು
ಬೆಟ್ಟದ+ತಾವರೆ =ಬೆಟ್ಟದಾವರೆ
ಕೈಯ+ತಪ್ಪು = ಕೈತಪ್ಪು
ಹಗಲಿನಲ್ಲಿ+ಕನಸು =ಹಗಲುಗನಸು
ಅರಮನೆ , ಎದೆಗುಹೆ ,ಜಲರಾಶಿ , ತಲೆನೋವು
━━━━━━━━━━━━━━━━━
2> ಕರ್ಮಧಾರೆಯ ಸಮಾಸ
ಪೂರ್ವೋತ್ತರ ಪದಗಳು ಲಿಂಗ ,ವಚನ, ವಿಭಕ್ತಿಗಳಿಂದ, ಸಮನಾಗಿದ್ದು, ವಿಶೇಷಣ, ವಿಶೇಷ್ಯಗಳಿಂದ ಕೂಡಿ ಆಗುವಸಮಾಸಕ್ಕೆ ಕರ್ಮಧಾರೆಯ ಸಮಾಸ ಎನ್ನಲಾಗಿದೆ.
ಉದಾ:
ಹೊಸದು+ಕನ್ನಡ =ಹೊಸಗನ್ನಡ
ಹಿರಿದು+ಜೇನು =ಹೆಜ್ಜೇನು
ಕಿರಿಯ+ಗೆಜ್ಜೆ =ಕಿರುಗೆಜ್ಜೆ
ಕೆಂದುಟಿ, ಚಿಕ್ಕಮಗು, ಸಿಡಿಮದ್ದು , ಪಂದತಿ
━━━━━━━━━━━━━━━━━
3> ದ್ವಿಗು ಸಮಾಸ
ಪೂರ್ವ ಪದವು ಸಂಖ್ಯಾವಾಚಕವಾಗಿದ್ದು ಉತ್ತರಪದದಲ್ಲಿರುವ ನಾಮಪದದೊಡನೆ ಸೇರಿ ಆಗುವ ಸಮಾಸವೇ ದ್ವಿಗು ಸಮಾಸ.
ಉದಾ:
ಒಂದು + ಕಣ್ಣು = ಒಕ್ಕಣ್ಣು
ಎರಡು+ಬಗೆ=ಇಬ್ಬಗೆ
ಸಪ್ತ+ಸ್ವರ=ಸಪ್ತಸ್ವರ
ನವರಾತ್ರಿ, ನಾಲ್ವಡಿ, ಮುಮ್ಮಡಿ, ದಶಮುಖಗಳು
━━━━━━━━━━━━━━━━━
4> ಅಂಶಿ ಸಮಾಸ
ಪೂರ್ವೋತ್ತರ ಪದಗಳು ಅಂಶಾಂಶಿಭಾವ ಸಂಬಂಧದಿಂದ ಸೇರಿ ಪೂರ್ವಪದದ ಅರ್ಥವು ಪ್ರಧಾನವಾಗಿ ಉಳ್ಳ ಸಮಾಸಕ್ಕೆ ಅಂಶಿ ಸಮಾಸವೆಂದು ಹೆಸರು. ಅಂಶವೆಂದರೆ ‘ಭಾಗ’ ಅಥವಾ ‘ಅವಯವ’
ಉದಾ:
ತಲೆಯ+ಮುಂದು=ಮುಂದಲೆ
ಬೆರಳಿನ+ತುದಿ = ತುದಿಬೆರಳು
ಕರೆಯ+ಒಳಗು= ಒಳಗೆರೆ
ಹಿಂದಲೆ, ಮುಂಗಾಲು, ಮಧ್ಯರಾತ್ರಿ, ಅಂಗೈ
━━━━━━━━━━━━━━━━━
5> ದ್ವಂದ್ವ ಸಮಾಸ
ಎರಡು ಅಥವಾ ಅನೇಕ ನಾಮಪದಗಳು ಸಹಯೋಗ ತೋರುವಂತೆ ಸೇರಿ ಎಲ್ಲ ಪದಗಳ ಅರ್ಥಗಳೂ ಪ್ರಧಾನವಾಗಿ ಉಳ್ಳ ಸಮಾಸಕ್ಕೆ ದ್ವಂದ್ವ ಸಮಾಸ ಎಂದು ಹೆಸರು.
ಉದಾ:
ಕೆರೆಯು + ಕಟ್ಟಿಯು + ಬಾವಿಯು= ಕೆರೆ ಕಟ್ಟೆ ಬಾವಿಗಳು
ಕಾಫಿಯೂ+ತಿಂಡಿಯೂ=ಕಾಫಿ-ತಿಂಡಿ
ಬೆಟ್ಟವೂ+ಗುಡ್ಡವೂ=ಬೆಟ್ಟಗುಡ್ಡಗಳು
ಅಣ್ಣನು +ತಮ್ಮನು= ಅಣ್ಣತಮ್ಮಂದಿರು
ತನುಮನಗಳು, ಕೈಕಾಲು, ಮಳೆಬೆಳೆ, ನಡೆನುಡಿ
━━━━━━━━━━━━━━━━━
6> ಬಹುವ್ರೀಹಿ ಸಮಾಸ
ಎರಡು ಅಥವಾ ಅನೇಕ ನಾಮಪದಗಳು ಸೇರಿ ಸಮಾಸವಾದಾಗ ಬೇರೊಂದು ಪದದ/ ಅನ್ಯಪದದ ಅರ್ಥವು ಪ್ರಧಾನವಾಗಿ ಉಳ್ಳ ಸಮಾಸಕ್ಕೆ ಬಹುವ್ರೀಹಿ ಸಮಾಸ ಎಂದು ಹೆಸರು.
ಉದಾ:
ಮೂರು + ಕಣ್ಣು +ಉಳ್ಳವ =ಮುಕ್ಕಣ್ಣ
ಶಾಂತಿಯ + ಖನಿಯಾಗಿರುವನು + ಯಾವನೋ=ಶಾಂತಿಖನಿ
ಸಹಸ್ರ +ಅಕ್ಷಿಗಳು + ಯಾರಿಗೋ =ಸಹಸ್ರಾಕ್ಷ
ಪಂಕದಲ್ಲಿ + ಜನಿಸಿದ್ದು+ಯಾವುದೊ=ಪಂಕಜ
ಚಂದ್ರನಖಿ, ಕುರುಕುಲಾರ್ಕ, ಚಕ್ರಪಾಣಿ, ನಿಶಾಚಾರಿ
━━━━━━━━━━━━━━━━━
7> ಕ್ರಿಯಾ ಸಮಾಸ
ಪೂರ್ವ ಪದವು ದ್ವಿತೀಯ ವಿಭಕ್ತಿಯಿಂದ ಕೂಡಿದ ಪದವಾಗಿದ್ದು, ಉತ್ತರಪದವು ಕ್ರಿಯೆಯೊಡನೆ ಕೂಡಿ ಆಗುವ ಸಮಾಸಕ್ಕೆ ಕ್ರಿಯಾ ಸಮಾಸ ಎನ್ನಲಾಗಿದೆ.
ಉದಾ:
ಸುಳ್ಳನ್ನು +ಆಡು=ಸುಳ್ಳಾಡು
ಕಣ್ಣನ್ನು +ತೆರೆ=ಕಣ್ದೆರೆ
ವಿಷವನ್ನು +ಕಾರು =ವಿಷಕಾರು
ಕೈಯನ್ನು +ಮುಗಿ=ಕೈಮುಗಿ
ಆಸೆಹೊತ್ತು, ಹಣ್ಣುತಿನ್ನು , ಕಂಗೆಡು , ಜೀವಬಿಡು
━━━━━━━━━━━━━━━━━
8> ಗಮಕ ಸಮಾಸ
ಪೂರ್ವ ಪದವು ಸರ್ವನಾಮ, ಕೃದಂತ ಗುಣವಾಚಕ ಸಂಖ್ಯೆಗಳಲ್ಲಿ ಒಂದಾಗಿದ್ದು, ಉತ್ತರದಲ್ಲಿರುವ ನಾಮಪದದೊಡನೆ ಕೂಡಿ ಆಗುವ ಸಮಾಸಕ್ಕೆ ಗಮಕ ಸಮಾಸ ಎಂದು ಹೆಸರು.
ಉದಾ:
ಸರ್ವನಾಮಕ್ಕೆ
ಅವನು +ಹುಡುಗ=ಆ ಹುಡುಗ
ಇವಳು + ಹುಡುಗಿ = ಈ ಹುಡುಗಿ
ಯಾವುದು+ ಮರ=ಯಾವಮರ
ಕೃಂದತಕ್ಕೆ
ಮಾಡಿದುದು+ಅಡುಗೆ =ಮಾಡಿದಡುಗೆ
ತೂಗುವುದು +ತೊಟ್ಟಿಲು =ತೂಗುವ ತೊಟ್ಟಿಲು
ಉಡುವುದು+ದಾರ=ಉಡುದಾರ
ಸುಡುಗಾಡು, ಬೆಂದಡಿಗೆ, ಕಡೆಗೋಲು
ಗುಣವಾಚಕಕ್ಕೆ
ಹಸಿಯದು +ಕಾಯಿ=ಹಸಿಯಕಾಯಿ
ಹಳೆಯದು +ಕನ್ನಡ=ಹಳೆಗನ್ನಡ
ಕಿರಿಮಗಳು, ಬಿಳಿಯಬಟ್ಟೆ , ಅರಳುಮೊಗ್ಗು
ಸಂಖ್ಯೆಗೆ
ನೂರು +ಹತ್ತು =ನೂರಹತ್ತು
ಮೂವತ್ತು+ಆರು=ಮೂವತ್ತಾರು
ಮೂವತ್ತು, ಹೆಪ್ಪತ್ತು, ಇಪ್ಪತೈದು .

    

ಮತದಾನದಂದು ಎಡಗೈ ತೋರುಬೆರಳಿಗೆ ಏಕೆ ಹಾಕುತ್ತಾರೆ ಶಾಯಿ?

ಮತದಾನದಂದು ಎಡಗೈ ತೋರುಬೆರಳಿಗೆ ಏಕೆ ಹಾಕುತ್ತಾರೆ ಶಾಯಿ?
 ಇಂದು ಮತದಾನ ಮಾಡಿದೆ, ಈಗ ನನ್ನ ಮೈಮೇಲೊಂದು ಕಪ್ಪು ಕಲೆ' ಇದು ಯಾವುದೋ ಅಜ್ಞಾತ ಕವಿಯೊಬ್ಬನ ಸಾಲು. ಚಿಕ್ಕ ಸಾಲಾದರೂ ಅರ್ಥವತ್ತಾದದ್ದೆ. ಆದರೆ ಇಲ್ಲಿ ಒಳಾರ್ಥ ವಿಶ್ಲೇಷಣೆ ಮಾಡುವುದು ಬೇಡ. ಮತದಾನದ ದಿನ ಬೆರಳಿಗೆ ಹಾಕುವ ಶಾಯಿಯ ಬಗ್ಗೆ ಮಾತ್ರವೇ ಚರ್ಚೆ ಮಾಡೋಣ.
ಮತದಾನ ಮಾಡಿದವರದ್ದು ಈಗ ಹೊಸ ಪ್ಯಾಷನ್ ಎಂದರೆ ಶಾಯಿ ಹಾಕಿದ ಬೆರಳು ಮುಂದೆ ಮಾಡಿ ಸೆಲ್ಫಿ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಲೈಕ್ಸ್‌ಗಳಿಗಾಗಿ ಕಾಯುವುದು. ಆದರೆ ಏಕೆ ಮತದಾನದ ಮಸಿಯನ್ನು ಎಡಗೈ ತೋರುಬೆರಳಿಗೇ ಹಾಕುತ್ತಾರೆ ಯೋಚಿಸಿದ್ದೀರಾ?. ಇಲ್ಲಿದೆ ನೋಡಿ ಕಾರಣ.
 ಎಡಗೈ ತೋರು ಬೆರಳು ಬೇಗ ಗಮನ ಸೆಳೆಯುತ್ತದಂತೆ ಅದಕ್ಕೆಂದು ಸಾಮಾನ್ಯವಾಗಿ ಎಡಗೈ ತೋರುಬೆರಳಿಗೆ ಮತದಾನದ ಇಂಕ್ ಹಾಕುತ್ತಾರೆ.
 ನಮ್ಮ ದೇಶದಲ್ಲಿ ಎಡಚರಿಗಿಂತಲೂ ಬಲಗೈ ಬಳಸುವವರ ಸಂಖ್ಯೆಯೇ ಹೆಚ್ಚು, ಬಲಗೈಯನ್ನು ಕೆಲಗಳಳಿಗೆ ಬಳಸುವಷ್ಟು ಎಡಗೈಯನ್ನು ಬಳಸುವುದಿಲ್ಲ, ಹಾಗಾಗಿ ಎಡಗೈಗೆ ಹಾಕಿದ ಇಂಕು ಬೇಗ ಅಳಿಸುವುದಿಲ್ಲ ಹಾಗಾಗಿ ಎಡಗೈಗೆ ಇಂಕು ಹಾಕುವುದು ರೂಢಿ.
 ಯಾವುದಾದರೂ ವ್ಯಕ್ತಿಗೆ ಎಡಗೈ ತೋರುಬೆರಳು ಇಲ್ಲದಿದ್ದರೆ ಆತನ ಎಡಗೈನ ಇತರ ಯಾವುದಾದರೂ ಒಂದು ಬೆರಳಿಗೆ ಶಾಯಿ ಹಾಕುತ್ತಾರೆ, ಎಡಗೈ ಇಲ್ಲದೇ ಹೋದಲ್ಲಿ ಬಲಗೈನ ತೋರುಬೆರಳಿಗೆ ಶಾಯಿ ಹಾಕುತ್ತಾರೆ. ಎರಡೂ ಕೈ ಇಲ್ಲದ ವ್ಯಕ್ತಿಗೆ ಕಾಲಿನ ಬೆರಳಿಗೆ ಇಂಕು ಹಾಕುತ್ತಾರೆ.
 ಚುನಾವಣೆಯಲ್ಲಿ ಈಗಾಗಲೇ ಮತ ಹಾಕಿ ಮತ್ತೆ ಉಪಚುನಾವಣೆಯಲ್ಲಿ ಅಥವಾ ಇನ್ನಾವುದೇ ಚುನಾವಣೆಯಲ್ಲಿ ಮತ ಹಾಕಬೇಕಾಗಿ ಬಂದಾಗ ಎಡಗೈಯ ಮಧ್ಯದ ಬೆರಳಿಗೆ ಇಂಕು ಹಾಕುತ್ತಾರೆ.
 ಮಾರ್ಕರ್‌ನಿಂದ ಮಾರ್ಕ್‌ ಮಾಡುವ, ಬೆರಳನ್ನು ಇಂಕಿನ ಬಾಟಲಿಯಲ್ಲಿ ಅದ್ದುವ ಪದ್ಧತಿಯೂ ಮುಂಚೆ ಇತ್ತು ಆದರೆ ಈಗ ಬೆರಳಿಗೆ ಇಂಕನ್ನು ಬಳಿಯುವ ಪದ್ಧತಿ ಚಾಲ್ತಿಯಲ್ಲಿದೆ
   ಇಂಕು ತಯಾರಿಸುವುದು #ಮೈಸೂರಿನಲ್ಲಿ
ಮತದಾನದ ದಿನ ಬೆರಳಿಗೆ ಹಚ್ಚುವ ಶಾಯಿ
ತಯಾರಿಸುವುದು ಇಡೀ ಭಾರತದಲ್ಲಿ ಕರ್ನಾಟಕದ ಮೈಸೂರಿನಲ್ಲಿ ಮಾತ್ರ. ಹೌದು, ಮೈಸೂರಿನ 'ಮೈಸೂರು ಪೇಂಟ್ಸ್‌ ಆಂಡ್ ವಾರ್ನಿಷ್ ಲಿಮಿಟೆಡ್‌' ಸಂಸ್ಥೆಯು ಮಾತ್ರವೇ ಈ ಶಾಯಿಯನ್ನು ಉತ್ಪಾದಿಸುತ್ತದೆ. ದೇಶದ ಎಲ್ಲೇ ಚುನಾವಣೆ ನಡೆದರೂ ಶಾಯಿ ಇಲ್ಲಿನಿಂದಲೇ ಸರಬರಾಜಾಗುವುದು.ಈ ಸಂಸ್ಥೆ ಕರ್ನಾಟಕ ಸರ್ಕಾರದ ಅಧೀನದಲ್ಲಿ ಕೆಲಸ ಮಾಡುತ್ತದೆ.

    

NEFT, RTGS, IMPS ಬಗ್ಗೆ ನಿಮಗೆಷ್ಟು ಗೊತ್ತು?

NEFT, RTGS, IMPS ಬಗ್ಗೆ ನಿಮಗೆಷ್ಟು ಗೊತ್ತು?*
ನಗದು ವ್ಯವಹಾರದ ಸಂದರ್ಭದಲ್ಲಿ ಹಲವು ಅಂಶಗಳು ನಮಗೆ ಗೊತ್ತಿರಬೇಕಾಗುತ್ತದೆ. ಅದರಲ್ಲೂ ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್, ಡಿಜಿಟಲ್ ಪಾವತಿಗಳ ಸಂದರ್ಭದಲ್ಲಂತೂ ಅದರ ಬಗೆಗಿನ ಜ್ಞಾನ ತುಂಬಾ ಮುಖ್ಯ. ಪ್ರಸ್ತುತ ನಗದು ರಹಿತ ವ್ಯವಹಾರಗಳು ಮುಖ್ಯ ಪಾತ್ರವಹಿಸಿದ್ದು, ಎಲ್ಲರೂ ಡಿಜಿಟಲೀಕರಣದತ್ತ ಮುಖ ಮಾಡಿದ್ದಾರೆ.
ಹೀಗಾಗಿ NEFT, RTGS, IMPS ನಂತಹ ವ್ಯವಹಾರದ ಸೂಕ್ಷ್ಮಗಳನ್ನು ತಿಳಿದುಕೊಳ್ಳಬೇಕಾಗುತ್ತದೆ.
*ನ್ಯಾಶನಲ್ ಇಲೆಕ್ಟ್ರಾನಿಕ್ ಫಂಡ್ ಟ್ರಾನ್ಸಫರ್(NEFT)*
ಎಲೆಕ್ಟ್ರಾನಿಕ್ ಬ್ಯಾಂಕಿಂಗ್(ನೆಟ್ ಬ್ಯಾಂಕಿಂಗ್) ವ್ಯವಸ್ಥೆಯಲ್ಲಿ ನ್ಯಾಶನಲ್ ಇಲೆಕ್ಟ್ರಾನಿಕ್ ಫಂಡ್ ಟ್ರಾನ್ಸಫರ್(NEFT) ಎಂಬ ಹಣ ರವಾನೆ ಮಾಡುವ ಆಯ್ಕೆಯನ್ನು ನೀಡಿರಲಾಗುತ್ತದೆ. ಐಎಫ್ ಎಸ್ ಸಿ ಕೋಡ್ ಬಳಸಿ ರವಾನೆ ಮಾಡಿದ ಹಣ ಕೆಲವೇ ಗಂಟೆಗಳಲ್ಲಿ ವರ್ಗಾವಣೆಯಾಗುತ್ತದೆ.ಹಣ ರವಾನೆ ಮಾಡುವಾಗ ಫಲಾನುಭವಿಯ ಖಾತೆ ಸಂಖ್ಯೆಯನ್ನು ಸೇರಿಸಬೇಕು. ನಂತರ ವರ್ಗಾವಣೆ ಮಾಡಬೇಕಾದ ಹಣವನ್ನು ನಮೂದಿಸಬೇಕು. ಒಂದು ದಿನಕ್ಕೆ 10 ಲಕ್ಷದವರೆಗೆ ಹಣ ವರ್ಗಾವಣೆ ಮಾಡಬಹುದು.
*ರಿಯಲ್ ಟೈಮ್ ಗ್ರಾಸ್ ಸ್ಟೇಟ್ ಮೆಂಟ್ (RTGS)*
ಇದು ಸಹ ನ್ಯಾಶನಲ್ ಇಲೆಕ್ಟ್ರಾನಿಕ್ ಫಂಡ್ ಟ್ರಾನ್ಸಫರ್ ತರಹದಲ್ಲೇ ಕೆಲಸ ಮಾಡುತ್ತದೆ. ಆದರೆ ಇಲ್ಲಿ ಹಣ ರವಾನೆಯ ವೇಗ ಜಾಸ್ತಿಯಾಗಿರುತ್ತದೆ. ಇಲ್ಲಿ ರವಾನೆಯಾಗುವ ಹಣದ ಪ್ರಮಾಣ ಸಹ ಹೆಚ್ಚು. ಒಂದು ಬ್ಯಾಂಕಿನಿಂದ ಇನ್ನೊಂದು ಬ್ಯಾಂಕಿಗೆ ಹಣ ರವಾನಿಸಬಹುದು. ಒಂದು ದಿನಕ್ಕೆ ಕನಿಷ್ಟ 2 ಲಕ್ಷದಿಂದ ಗರಿಷ್ಠ 10 ಲಕ್ಷದವರೆಗೆ ಹಣ ರವಾನಿಸಬಹುದು.
*ಇಮಿಡಿಯಟ್ ಫಂಡ್ ಟ್ರಾನ್ಸಫರ್(IMPS)*
ಇಮಿಡಿಯಟ್ ಫಂಡ್ ಟ್ರಾನ್ಸಫರ್ ಮೂಲಕ ಹಣವನ್ನು ವೇಗವಾಗಿ ರವಾನೆ ಮಾಡಬಹುದು. ಆದರೆ ಎಲ್ಲ ಬ್ಯಾಂಕ್ ಗಳುಈ ಬಗೆಯ ಸೌಲಭ್ಯ ನೀಡಿಲ್ಲ. ನಿಮ್ಮ ಇಂಟರ್ ನೆಟ್ ಬ್ಯಾಂಕಿಂಗ್ ತಾಣಕ್ಕೆ ಹೋಗಿ ಪರಿಶೀಲನೆ ಮಾಡಿಕೊಂಡು ಮುಂದುವರಿಯಬೇಕಾಗುತ್ತದೆ.
    

ಪ್ರಮುಖ_ಜಾಲತಾಣಗಳು_ಮತ್ತು_ಸ್ಥಾಪಕರು..

ಪ್ರಮುಖ_ಜಾಲತಾಣಗಳು_ಮತ್ತು_ಸ್ಥಾಪಕರು..
━━━━━━━━━━━━━━━━━━━━
☘ ಇ ಮೇಲ್..... ರೇ ಟಾಮ್ಲಿನ್ ಸನ್
☘ ಹಾಟ್ ಮೇಲ್... ಸಬೀರ್ ಬಾಟಿಯಾ
☘ ಫೇಸ್ ಬುಕ್.... ಮಾರ್ಟಿನ್ ಜುಕರ್ ಬರ್ಗ್
☘ ವ್ಯಾಟ್ಸಪ್..... ಜಾನ್ ಕ್ರೋಮ್ & ಬ್ರಿಯಾನ್ ಆಕ್ಟನ್
☘ ಅಮೇಜಾನ್.... ಜೆಫ್ ಬೆಜೋಸ್
☘ ಗೂಗಲ್..... ಲ್ಯಾರಿಪೇಜ್
☘ ಡಬ್ಲೂ.ಡಬ್ಲೂ.ಡಬ್ಲೂ..... ಟೀಮ್ ಬರ್ನರ್ಸ ಲೀ
☘ ವಿಕಿಲೀಕ್ಸ್..... ಜೂಲಿಯಸ್ ಅಸ್ಸಾಂಜೆ
☘ ವಿಕೀಪಿಡಿಯ..... ವಿಲಿಯಂ ಜೂರಿ ವೇಲ್ಸ್


    

ಭಾರತದಲ್ಲಿ ಕ್ರೀಡಾಂಗಣಗಳು

ಭಾರತದಲ್ಲಿ ಕ್ರೀಡಾಂಗಣಗಳು*
     *************
* *ಬರಾಬಾಟಿ ಕ್ರೀಡಾಂಗಣ: ಕಟಕ್*
* *ಬರ್ಕತುಲ್ಲಾ ಖಾನ್ ಕ್ರೀಡಾಂಗಣ: ಜೋಧ್ಪುರ್*
* *ಬ್ರಬೌರ್ನೆ ಕ್ರೀಡಾಂಗಣ: ಮುಂಬೈ*
* *ಈಡನ್ ಗಾರ್ಡನ್ಸ್: ಕೊಲ್ಕತ್ತಾ*
* *ಫಿರೋಜ್ ಶಾ ಕೋಟ್ಲಾ: ದೆಹಲಿ*
* *ಗಾಂಧಿ ಕ್ರೀಡಾಂಗಣ: ಜಲಂಧರ್*
* *ಗ್ರೀನ್ ಪಾರ್ಕ್: ಕಾನ್ಪುರ್*
* *ಇಂದಿರಾ ಗಾಂಧಿ ಕ್ರೀಡಾಂಗಣ: ವಿಜಯವಾಡಾ*
* *ರಾಜೀವ್ ಗಾಂಧಿ ಪೋರ್ಟ್ ಸಿಲ್ವರ್ ಜುಬಿಲೀ*
 * *ಕ್ರೀಡಾಂಗಣ: ವಿಶಾಖಪಟ್ಟಣಂ*
* *ಜವಾಹರಲಾಲ್ ನೆಹರು ಕ್ರೀಡಾಂಗಣ: ನವ ದೆಹಲಿ*
* *ಲಾಲ್ ಬಹದ್ದೂರ್ ಶಾಸ್ತ್ರಿ ಕ್ರೀಡಾಂಗಣ: ಹೈದರಾಬಾದ್*
* *ಎಂ. ಚಿನ್ನಸ್ವಾಮಿ ಕ್ರೀಡಾಂಗಣ: ಬೆಂಗಳೂರು*
* *ಎಂ.ಎ ಚಿದಂಬರಂ ಕ್ರೀಡಾಂಗಣ: ಚೆನ್ನೈ*
* *ಮಾಧವರಾವ್ ಸಿಂಧಿಯಾ ಕ್ರಿಕೆಟ್ ಮೈದಾನ: ರಾಜ್ಕೋಟ್* 
* *ಮೊಯಿನ್-ಉಲ್-ಹಕ್ ಕ್ರೀಡಾಂಗಣ: ಪಾಟ್ನಾ*
* *ಸರ್ದಾರ್ ವಲ್ಲಭಾಯಿ ಪಟೇಲ್ ಮೋತೆರಾ* 
* *ಕ್ರೀಡಾಂಗಣ: ಅಹಮದಾಬಾದ್*
* *ಸವಾಯಿ ಮಾನ್ಸಿಂಗ್ ಕ್ರೀಡಾಂಗಣ: ಜೈಪುರ್



    

ರಾಷ್ಟ್ರೀಯ ಆಟಗಳು ಮತ್ತು ಕಪ್ಗಳು / ಟ್ರೋಫಿಗಳ ಪಟ್ಟಿ:

ರಾಷ್ಟ್ರೀಯ ಆಟಗಳು ಮತ್ತು ಕಪ್ಗಳು / ಟ್ರೋಫಿಗಳ ಪಟ್ಟಿ:*
         
* *ಅಗರ್ವಾಲ್ ಕಪ್: ಬ್ಯಾಡ್ಮಿಂಟನ್*
* *ಅಘಾ ಖಾನ್ ಕಪ್: ಹಾಕಿ*
* *ಆಲ್ ಇಂಡಿಯಾ ಮಹಿಳಾ ಗುರು ನಾನಕ್*
* *ಚಾಂಪಿಯನ್ಷಿಪ್: ಹಾಕಿ*
* *ಬ್ಯಾಂಡೋಡ್ಕರ್ ಟ್ರೋಫಿ: ಫುಟ್ಬಾಲ್*
* *ಬೆಂಗಳೂರು ಬ್ಲೂಸ್ ಚಾಲೆಂಜ್ ಕಪ್: ಬ್ಯಾಸ್ಕೆಟ್ಬಾಲ್*
*_*ಬಾರ್ನಾ-ಬೆಲ್ಲಾಕ್ ಕಪ್: ಟೇಬಲ್ ಟೆನಿಸ್*
* *ಬೀಟನ್ ಕಪ್: ಹಾಕಿ*
* *ಬಾಂಬೆ ಗೋಲ್ಡ್ ಕಪ್: ಹಾಕಿ*
* *ಬರ್ದ್ವಾನ್ ಟ್ರೋಫಿ: ತೂಕ-ತರಬೇತಿ*
* *ಚಾರ್ಮಿನಾರ್ ಟ್ರೋಫಿ: ಅಥ್ಲೆಟಿಕ್ಸ್*
* *ಚಢ ಕಪ್: ಬ್ಯಾಡ್ಮಿಂಟನ*್
* *ಸಿ. ಕೆ. ನಾಯುಡ್ ಟ್ರೋಫಿ: ಕ್ರಿಕೆಟ್*
* *ಚಾಕೊಯಾ ಗೋಲ್ಡ್ ಟ್ರೋಫಿ: ಫುಟ್ಬಾಲ್*
* *ದಿವಾನ್ ಕಪ್: ಬ್ಯಾಡ್ಮಿಂಟನ್*
* *ದುಲೀಪ್ ಟ್ರೋಫಿ: ಕ್ರಿಕೆಟ*್
* *ಡಿ. ಸಿ. ಎಂ. ಕಪ್: ಫುಟ್ಬಾಲ್*
* *ಡುರಾಂಡ್ ಕಪ್: ಫುಟ್ಬಾಲ್*
* *ಧ್ಯಾನ್ ಚಂದ್ ಟ್ರೋಫಿ: ಹಾಕಿ*
* *ಡಾ. ಬಿ. ಸಿ. ರಾಯ್ ಟ್ರೋಫಿ: ಫುಟ್ಬಾಲ್ (ಜೂನಿಯರ್)*
* *ಎಜ್ರಾ ಕಪ್: ಪೊಲೊ*
* *F. A. ಕಪ್: ಫುಟ್ಬಾಲ್*
* *ಜಿ.ಡಿ.ಬಿರ್ಲಾ ಟ್ರೋಫಿ: ಕ್ರಿಕೆಟ್*
* *ಗುಲಾಮ್ ಅಹ್ಮದ್ ಟ್ರೋಫಿ: ಕ್ರಿಕೆಟ*್
* *ಗುರ್ಮೆತ್ ಟ್ರೋಫಿ: ಹಾಕಿ*
* *ಗುರಾ ನಾನಕ್ ಕಪ್: ಹಾಕಿ*
* *ಜ್ಞಾನತಿ ದೇವಿ ಟ್ರೋಫಿ: ಹಾಕಿ*
* *ಹೋಲ್ಕರ್ ಟ್ರೋಫಿ: ಸೇತುವೆ*
* *ಲ್ರಾನಿ ಟ್ರೋಫಿ: ಕ್ರಿಕೆಟ್*
* *I.ಎಫ್. ಎ. ಶೀಲ್ಡ್: ಫುಟ್ಬಾಲ್*
* *lndira ಗೋಲ್ಡ್ ಕಪ್: ಹಾಕಿ*
* *ಜವಾಹರಲಾಲ್ ಚಾಲೆಂಜ್: ಏರ್ ರೇಸಿಂಗ್*
* *ಜಸ್ವಂತ್ ಸಿಂಗ್ ಟ್ರೋಫಿ: ಬೆಸ್ಟ್ ಸರ್ವೀಸ್ ಸ್ಪೋರ್ಟ್ಸ್ಮನ್*
* *ಕುಪ್ಪಸ್ವಾಮಿ ನಾಯ್ಡು ಟ್ರೋಫಿ: ಹಾಕಿ*
* *ಲೇಡಿ ರಟ್ಟನ್ ಟಾಟಾ ಟ್ರೋಫಿ: ಹಾಕಿ*
* *ಎಮ್ಸಿಸಿ ಟ್ರೋಫಿ: ಹಾಕಿ*
* *ಮೊಯಿನ್ಯುಡೋಲಾದ ಗೋಲ್ಡ್ ಕಪ್: ಕ್ರಿಕೆಟ್*
* *ಮುರುಗಪ್ಪ ಗೋಲ್ಡ್ ಕಪ್: ಹಾಕಿ*
* *ಮೋದಿ ಗೋಲ್ಡ್ ಕಪ್: ಹಾಕಿ*
* *ನಾರಂಗ್ ಕಪ್: ಬ್ಯಾಡ್ಮಿಂಟನ್*
* *ನೆಹರು ಟ್ರೋಫಿ: ಹಾಕಿ*
* *ನಿಕ್ಸನ್ ಗೋಲ್ಡ್ ಕಪ್: ಫುಟ್ಬಾಲ್*
* *ಒಬೈದ್ ಉಲ್ಲಾಹ್ ಗೋಲ್ಡ್ ಕಪ್: ಹಾಕಿ*
* *ಪ್ರತಿ ಸಿಂಗ್ ಕಪ್: ಪೊಲೊ*
* *ರಾಣಿ ಝಾನ್ಸಿ ಟ್ರೋಫಿ: ಕ್ರಿಕೆಟ್*
* *ರಣಜಿತ್ ಟ್ರೋಫಿ: ಕ್ರಿಕೆಟ್*
* *ರಂಗಸ್ವಾಮಿ ಕಪ್: ಹಾಕಿ*
* *ರಣಜಿತ್ ಸಿಂಗ್ ಗೋಲ್ಡ್ ಕಪ್: ಹಾಕಿ*
* *ರಾಜೇಂದ್ರ ಪ್ರಸಾದ್ ಕಪ್: ಟೆನಿಸ್*
* *ರಾಮಾನುಜನ್ ಟ್ರೋಫಿ: ಟೇಬಲ್ ಟೆನಿಸ್*
* *ರೆನೆ ಫ್ರಾಂಕ್ ಟ್ರೋಫಿ: ಹಾಕಿ*
* *ರಾಧಾ ಮೋಹನ್ ಕಪ್: ಪೊಲೊ*
* *ರಘ್ಬಿರ್ ಸಿಂಗ್ ಮೆಮೋರಿಯಲ್: ಫುಟ್ಬಾಲ್*
* *ರೋಹಿಂಟನ್ ಬರಿಯಾ ಟ್ರೋಫಿ: ಕ್ರಿಕೆಟ್*
* *ರೋವರ್ಸ್ ಕಪ್: ಫುಟ್ಬಾಲ್*
* *ಸಂಜಯ್ ಗೋಲ್ಡ್ ಕಪ್: ಫುಟ್ಬಾಲ್*
* *ಸಂತೋಷ್ ಟ್ರೋಫಿ: ಫುಟ್ಬಾಲ್*
* *ಸರ್ ಅಶುತೋಷ್ ಮುಖರ್ಜಿ: ಫುಟ್ಬಾಲ್*
* *ಸುಬ್ರೊಟೊ ಕಪ್: ಫುಟ್ಬಾಲ್*
* *ಸಿಂಧಿಯಾ ಗೋಲ್ಡ್ ಕಪ್: ಹಾಕಿ*
* *ಸಾಹ್ನಿ ಟ್ರೋಫಿ: ಹಾಕಿ*
* *ಶೀಶ್ ಮಹಲ್ ಟ್ರೋಫಿ: ಕ್ರಿಕೆಟ್*
* *ಟಾಡ್ ಮೆಮೋರಿಯಲ್ ಟ್ರೋಫಿ: ಫುಟ್ಬಾಲ್*
* *ಟಾಮಿ ಇಮಾನ್ ಗೋಲ್ಡ್ ಕಪ್: ಹಾಕಿ*
* *ವಿಟ್ಟಲ್ ಟ್ರೋಫಿ: ಫುಟ್ಬಾಲ*್
* *ವಿಜ್ಜಿ ಟ್ರೋಫಿ: ಕ್ರಿಕೆಟ್*
* *ವಿಜಯ್ ಮರ್ಚೆಂಟ್ ಟ್ರೋಫಿ: ಕ್ರಿಕೆಟ್*
* *ವೆಲ್ಲಿಂಗ್ಟನ್ ಟ್ರೋಫಿ: ರೋಯಿಂಗ್*
* *ವಿಲ್ಸ್ ಟ್ರೋಫಿ: ಕ್ರಿಕೆಟ್*
  ===========